
ಚಿಂತಾಮಣಿ: ಜೈಲು ಸೇರಿದ ಎರಡೇ ಗಂಟೆಯಲ್ಲಿ ಕೈದಿ ಸಾವನ್ನಪ್ಪಿದ ಘಟನೆ ಚಿಂತಾಮಣಿ ನಗರದ ಉಪ ಕಾರಾಗೃಹದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಚಿಂತಾಮಣಿ ತಾಲೂಕಿನ ಗುಡಿಸಲಹಳ್ಳಿ ನಿವಾಸಿ ಮುನಿರೆಡ್ಡಿ(38) ಮೃತಪಟ್ಟ ಆರೋಪಿ. 2016ರಲ್ಲಿ ವರದಕ್ಷಿಣೆ ಕಿರುಕುಳ ಸಂಬಂಧ ದೂರಿನಲ್ಲಿ ವಾರೆಂಟ್ ಆಗಿ ಡಿಸೆಂಬರ್ 26ರಂದು ಸಂಜೆ ಚಿಂತಾಮಣಿ ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಉಪ ಕಾರಾಗೃಹಕ್ಕೆ ಸೇರಿಸಲಾಗಿತ್ತು. ಜೈಲು ಸೇರಿದ ಎರಡು ಗಂಟೆಯಲ್ಲಿ ಆರೋಪಿ ಮುನಿರೆಡ್ಡಿಗೆ ಲೋ ಬಿಪಿ ಆಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಕಾರಾಗೃಹದ ಸಿಬ್ಬಂದಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.