
ಬೆಂಗಳೂರು: ರಾಮನವಮಿಯಂದು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ತೆರಳುತ್ತಿದ್ದ ಯುವಕರ ಅಡ್ಡಗಟ್ಟಿ ಅಲ್ಲಾ ಹು ಅಕ್ಬರ್ ಕೂಗಲು ಹೇಳಿ ಅನ್ಯಕೋಮಿನ ಕೆಲವು ಯುವಕರು ಹಲ್ಲೆ ನಡೆಸಿದ್ದಾರೆ.
ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದ ಇಬ್ಬರು ಅಪ್ರಾಪ್ತರು ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಬುಧವಾರ ಘಟನೆ ನಡೆದಿದೆ.
ಸಹಕಾರ ನಗರದ ಡಿ. ಪವನ್ ಕುಮಾರ್, ವಿನಾಯಕ್, ರಾಹುಲ್ ಹಲ್ಲೆಗೊಳಗಾದವರು. ಸಂತ್ರಸ್ತರು ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಕೃತ್ಯವೆಸಗಿ ಪರಾರಿಯಾಗಿದ್ದ ಕಿಡಿಗೇಡಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಹೊತ್ತಿನಲ್ಲಿ ಬಂಧಿಸಿದ್ದಾರೆ. ಸಮೀರ್ ಮತ್ತು ಫರ್ಮಾನ್ ಹಾಗೂ ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ.