
ದಕ್ಷಿಣ ಆಫ್ರಿಕಾದ ಆಟಗಾರರು, ಭಾರತೀಯ ಆಟಗಾರರ ವಿರುದ್ಧ ಸಂಘಟಿತ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಭಾರತ ತಂಡವು ಸೋಲು ಕಂಡಿತು. ಈ ಸಂದರ್ಭದಲ್ಲಿ ಟ್ರೋಫಿ ಗೆದ್ದ ಖುಷಿಯಲ್ಲಿರುವ ಭಾರತೀಯ ಮೂಲದ ಕೇಶವ್ ಮಹರಾಜ್ ಟ್ರೋಫಿ ಎತ್ತಿಕೊಂಡಿರುವ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿ ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಲೆಸಿದ್ದರೂ ಭಾರತದ ಮೇಲಿನ ಅವರ ಪ್ರೀತಿ ಕಂಡ ಹಲವರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಕೇಶವ್ ಮಹರಾಜ್, ಅದ್ಭುತ ಸರಣಿಯಲ್ಲಿ ಈ ತಂಡದ ಭಾಗವಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ. ನಾವು ಇನ್ನೂ ಬಲಿಷ್ಠವಾಗಿ ಮುಂದಿನ ಪಂದ್ಯಕ್ಕೆ ಸಿದ್ಧರಾಗಬೇಕಿದೆ. ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.
ಕೇಶವ್ ಮಹರಾಜ್ ಕೂಡ ಹನುಮಂತನ ಭಕ್ತರಂತೆ. ಹೀಗಾಗಿ ತಮ್ಮ ಭಕ್ತಿಯನ್ನು ಅವರು ಆಗಾಗ ಹೀಗೆ ತೋರಿಸುತ್ತಿದ್ದಾರೆ. ಆಗಾಗ ಹನುಮಂತನ ದೇವಸ್ಥಾನಕ್ಕೂ ಹೋಗುತ್ತಿರುತ್ತಾರೆ. ಈ ಫೋಟೋಗಳನ್ನು ಕೂಡ ಅವರು ಹಂಚಿಕೊಳ್ಳುತ್ತಿರುತ್ತಾರೆ. ಜೈ ಹನುಮಾನ್ ಎಂದು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿರುತ್ತಾರೆ.
ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಅವರು, ಆ ತಂಡದ ಭಾಗವಾಗಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇಲ್ಲಿಯವರೆಗೂ ದಕ್ಷಿಣ ಆಫ್ರಿಕಾ ಪರ 18 ಏಕದಿನ ಪಂದ್ಯ ಹಾಗೂ 39 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಬೌಲಿಂಗ್ ನೊಂದಿಗೆ ಬ್ಯಾಟಿಂಗ್ ನಲ್ಲಿಯೂ ಮಿಂಚುತ್ತಿದ್ದಾರೆ. ಸದ್ಯ ತಮ್ಮದೆ ನಾಡಿನಲ್ಲಿ ಭಾರತದ ಸೋಲಿಗೂ ಕಾರಣವಾಗಿದ್ದಾರೆ.