alex Certify ಬ್ಯಾಟರಿ ಹೀಟಿಂಗ್ ಸಮಸ್ಯೆ: 6,367 ಐ-ಪೇಸ್ ಕಾರುಗಳನ್ನು ಹಿಂಪಡೆಯಲು ಮುಂದಾದ ಜಾಗ್ವಾರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಟರಿ ಹೀಟಿಂಗ್ ಸಮಸ್ಯೆ: 6,367 ಐ-ಪೇಸ್ ಕಾರುಗಳನ್ನು ಹಿಂಪಡೆಯಲು ಮುಂದಾದ ಜಾಗ್ವಾರ್‌

ಬ್ಯಾಟರಿ ದೋಷದ ಕಾರಣದಿಂದ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇದ್ದ 6,400ರಷ್ಟು ಐ-ಪೇಸ್ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಜಾಗ್ವರ್‌ ಹಿಂಪಡೆದಿದೆ.

ಅಗ್ನಿ ಅನಾಹುತದ ರಿಸ್ಕ್ ಹೋಗಲಾಡಿಸುವ ಉದ್ದೇಶದಿಂದ ಈ ಕಾರುಗಳಲ್ಲಿ ಬ್ಯಾಟರಿ ನಿಯಂತ್ರಣದ ಮಾಡ್ಯೂಲ್‌ ಅನ್ನು ಬದಲಿಸಲಾಗುವುದು ಎಂದು ಟಾಟಾ ಸಮೂಹದ ಸಂಸ್ಥೆ ತಿಳಿಸಿದೆ.

ಈ ಪಿಂಪಡೆತದಿಂದ ಒಟ್ಟಾರೆ 6,367ರಷ್ಟು ಐ-ಪೇಸ್ ಎಲೆಕ್ಟ್ರಿಕ್ ಕಾರುಗಳ ಮೇಲೆ ಪರಿಣಾಮವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ (ಎನ್‌ಎಚ್‌ಟಿಎಸ್‌ಎ) ತಿಳಿಸಿದೆ. ಈ ವಾಹನಗಳನ್ನು 2019 – 2023ರ ನಡುವೆ ನಿರ್ಮಿಸಲಾಗಿದೆ. ಈ ವಾಹನಗಳ ಬ್ಯಾಟರಿಗಳು ಚಾರ್ಜ್ ಮಾಡಿದಾಗ ವಿಪರೀತ ಬಿಸಿಯಾಗಿ ಅಗ್ನಿ ಅವಘಡ ಸಂಭವಿಸುವ ರಿಸ್ಕ್ ಹೊಂದಿದ್ದವು.

ಅಮೆರಿಕದಲ್ಲಿ ಜಾಗ್ವರ್‌‌ ಐ-ಪೇಸ್‌ನ ಎಂಟು ಕಾರುಗಳಲ್ಲಿ ಅಗ್ನಿ ಅವಘಡ ಸಂಭವಿಸಿದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಆಟೋ ದಿಗ್ಗಜ, ಹಿಂಪಡೆದಿರುವ ಕಾರುಗಳಲ್ಲಿರುವ ಬ್ಯಾಟರಿ ಶಕ್ತಿಯ ನಿಯಂತ್ರಿಸುವ ಸಾಫ್ಟ್‌ವೇರ್‌ ಮೇಲ್ದರ್ಜೆಗೇರಿಸುವ ಸಾಧ್ಯತೆ ಇದೆ. ಈ ಬದಲಿಯನ್ನು ಉಚಿತವಾಗಿ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ಈ ಸಾಫ್ಟ್‌ವೇರ್‌ ಮೇಲ್ದರ್ಜೆಯನ್ನು ಜಾಗ್ವಾರ್‌ ಎಲೆಕ್ಟ್ರಿಕ್ ಕಾರು ಡೀಲರ್‌ಗಳ ಮೂಲಕ ಉಚಿತವಾಗಿ ಮಾಡಿಕೊಡಲಾಗುವುದು. ಈ ಮೇಲ್ದರ್ಜೆಯ ಬಳಿಕ ಕಾರಿನ ಬ್ಯಾಟರಿ ಅತಿಯಾಗಿ ಬಿಸಿಯಾಗುವ ಸಾಧ್ಯತೆ ಕಂಡು ಬಂದಲ್ಲಿ, ಚಾಲಕನಿಗೆ ಅಲರ್ಟ್ ರವಾನೆ ಮಾಡುವುದಲ್ಲದೇ, ಬ್ಯಾಟರಿ ಚಾರ್ಜಿಂಗ್ ಅನ್ನು 75%ಗೆ ತಾತ್ಕಾಲಿಕವಾಗಿ ಸೀಮಿತಗೊಳಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...