ಹಾಸನ: ರಾಜ್ಯದಲ್ಲಿ 15 ರಿಂದ 20 ಸಂಸದ ಸ್ಥಾನ ಗೆಲ್ಲುವುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ಮಾಜಿ ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಸಿ.ಟಿ. ರವಿ, ದೇಶದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುತ್ತದೆ ಎಂದು ಶೆಟ್ಟರ್ ಹೇಳಿರಬಹುದು. ಜಗದೀಶ್ ಶೆಟ್ಟರ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಈಗ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. ಹೊಸದಾಗಿ ಮತಾಂತರ ಆದವರು ಐದು ಸಲ ನಮಾಜ್ ಮಾಡುತ್ತಾರೆ. ಅಲ್ಲೇ ಇರುವವರು ಒಂದು ಸಲ ಮಾತ್ರ ನಮಾಜ್ ಮಾಡುತ್ತಾರೆ ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡಲ್ಲವೆಂದು ಮುಖ್ಯಮಂತ್ರಿಗಳು ಹೇಳಬೇಕಿತ್ತು. ಅವರ ಧಾಟಿಯಲ್ಲಿಯೇ ಕಾವೇರಿ ನೀರು ಬಿಡಲ್ಲವೆಂದು ಹೇಳಬೇಕಿತ್ತು. ಆದರೆ, ತಲೆ ಹೋದರೂ ಪರವಾಗಿಲ್ಲ, ನೀರು ಕೊಟ್ಟೆ ಕೊಡ್ತೀನಿ ಎನ್ನುತ್ತಿದ್ದಾರೆ. ರಾಜ್ಯದ ರೈತರ ಕಡೆಗೆ ಸಿಎಂ ಸಿದ್ದರಾಮಯ್ಯ ಕಣ್ಣೆತ್ತಿ ಸಹ ನೋಡುತ್ತಿಲ್ಲ ಎಂದು ಟೀಕಿಸಿದ್ದಾರೆ.