![](https://kannadadunia.com/wp-content/uploads/2021/11/jagadishshettar-1612173093.jpg)
ಹುಬ್ಬಳ್ಳಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಲ್ಲಿದ್ದ ಹಲವರು ಮತ್ತೆ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್ ಗೆ ಕೈಕೊಟ್ಟು ಬಿಜೆಪಿಗೆ ಮರಳಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದು, ತನ್ನೊಂದಿಗೆ ಕಾಂಗ್ರೆಸ್ ಸೇರಿದ ಎಲ್ಲರೂ ವಾಪಾಸ್ ಆಗಲಿದ್ದಾರೆ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ನನ್ನೊಂದಿಗೆ ಕಾಂಗ್ರೆಸ್ ಸೇರಿದವರೆಲ್ಲರೂ ಮತ್ತೆ ಬಿಜೆಪಿಗೆ ಬರಲಿದ್ದಾರೆ. ಕಾಂಗ್ರೆಸ್ ನ ಹಲವರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು.
ಆದಷ್ಟು ಶೀಘ್ರದಲ್ಲಿ ಎಲ್ಲರೂ ಬಿಜೆಪಿಗೆ ವಾಪಾಸ್ ಆಗಲಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಪಕ್ಷದ ವರ್ಚಸ್ಸು ಬೆಳೆಯುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ತೊರೆಯಲು ಹಲವರು ಮನಸ್ಸು ಮಾಡಿದ್ದಾರೆ. ಶಾಸಕ ಬಾಲಕೃಷ್ಣ ಹೇಳಿಕೆ ಕಾಂಗ್ರೆಸ್ ನಲ್ಲಿದ್ದವರ ಮನಃಸ್ಥಿತಿ ತೋರುತ್ತಿದೆ. ಚುನಾವಣೆಗಾಗಿ ಭಾಗ್ಯಗಳನ್ನು ಕೊಟ್ಟರು ಎಂಬ ಭಾವನೆ ಜನರಲ್ಲಿಯೂ ಮೂಡಿದೆ ಎಂದು ಹೇಳಿದರು.