ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಫೇಸ್ ಬುಕ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.
ಶೆಟ್ಟರ್ ಅವರ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಹಣಕಾಸು ವ್ಯವಹಾರದ ಸಂದೇಶ ರವಾನಿಸಿದ್ದಾರೆ. ಖಾತೆಗೆ 7.50 ಲಕ್ಷ ಹಣ ಬಂದಿದ್ದು, ನಾನು ಮಾಡಿದ ವ್ಯವಹಾರದಲ್ಲಿ ಆರಂಭದಲ್ಲಿಯೇ ಲಾಭ ಬಂದಿದೆ ನೀವು ಸಹ ವ್ಯವಹಾರ ನಡೆಸಿ ಲಾಭ ಮಾಡಿಕೊಳ್ಳಿ ಎಂದು ಪೋಸ್ಟ್ ಮಾಡಿದ್ದಾರೆ.
ಕ್ರಿಸ್ಟಿನಾ ಪನಾಟೆ ಎಂಬುವವರ ಸಲಹೆಯನ್ನೂ ಪಡೆಯಬಹುದು ಎಂದು ಬರೆಯಲಾಗಿದೆ. ಜಗದೀಶ್ ಶೆಟ್ಟರ್ ಫೇಸ್ ಬುಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಪುತ್ರ ಸಂಕಲ್ಪ ಶೆಟ್ಟರ್ ಮಾಹಿತಿ ನೀಡಿದ್ದು, ಇದನ್ನು ನೋಡಿ ಯಾರೂ ಹಣ ಹಾಕಬಾರದು ಎಂದು ಮನವಿ ಮಾಡಿದ್ದಾರೆ.