
ಹುಬ್ಬಳ್ಳಿ: ಡಿಸಿಎಂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನ ತತ್ವ, ಸಿದ್ಧಾಂತಕ್ಕೆ ವಿರುದ್ಧವಾಗಿದ್ದರೆ ಅವರಿಗೆ ಗೇಟ್ ಪಾಸ್ ನೀಡಿ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಟಾಂಗ್ ನಿಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಡಿ.ಕೆ.ಶಿವಕುಮಾರ್ ಕುಂಭಮೇಳಕ್ಕೆ ಹೋಗಿರುವ ವಿಚಾರ, ಕೊಯಮತ್ತೂರಿನಲ್ಲಿ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರವಾಗಿ ಕಾಂಗ್ರೆಸ್ ನಲ್ಲಿಯೇ ಚರ್ಚೆ ಆರಂಭವಾಗಿದೆ. ಡಿ.ಕೆ.ಶಿವಕುಮಾರ್ ಅವರು ಕುಂಭಮೇಳ, ಕೋಯಮತ್ತೂರ್ ಗೆ ಹೋಗಿರುವುದು ಸಹಜ. ಅದರಲ್ಲಿ ದ್ದೊಡ್ದಸ್ಥಿಕೆ ಏನಿಲ್ಲ. ಇದು ಕಾಂಗ್ರೆಸ್ ನವರಿಗೆ ಸರಿ ಅನಿಸಿಲ್ಲ. ಅವರ ತತ್ವ, ಸಿದ್ಧಾಂತಕ್ಕೆ ವಿರುದ್ಧವಾಗಿದ್ದರೆ ಡಿಕೆಶಿ ಅವರನ್ನು ಸಸ್ಪೆಂಡ್ ಮಾಡಿ ಎಂದು ಹೇಳಿದರು.
ಕಾಂಗ್ರೆಸ್ ನವರಿಗೆ ಹಿಂದೂಗಳ ಬಗ್ಗೆ ವಿರೋಧವಿದೆ. ಇದರಿಂದಾಗಿ ಪಕ್ಷ ಉದ್ಧಾರವಾಗಲ್ಲ. ಹಿಂದೂಗಳಿಲ್ಲದೇ ನೀವು ರಾಜಕರಣ ಮಾಡುತ್ತೀರಿ ಎನ್ನುವುದಾದರೆ ಅದು ನಿಮ್ಮ ಹಣೆಬರಹ. ಹಿಂದುಗಳಿಗೆ ಅವಮಾನಿಸುವುದು, ಕೀಳಾಗಿ ಕಣೋದು ಅವನತಿಗೆ ಕಾರಣ ಎಂದು ಕಿಡಿಕಾರಿದರು.
ಕುಂಭಮೇಳದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಹೇಳಿಕೆಗಳು ಹಿಂದೂ ವಿರೋಧಿಯಾಗಿದೆ. ಕಾಂಗೆಸ್ ನ ಹಲವು ರಾಜಕಾರಣಿಗಳು ಕುಂಭಮೇಳಕ್ಕೆ ಹೋಗಿದ್ದಾರೆ. ರಾಜಕಾರಾಕ್ಕೆ ಧರ್ಮವನ್ನು ತಳುಕು ಹಾಕಬಾರದು ಎಂದು ಹೇಳಿದರು.