ಹುಬ್ಬಳ್ಳಿ: ನನ್ನನ್ನು ಸೋಲಿಸುವುದೇ ಬಿಜೆಪಿ ಅಜೆಂಡಾ ಆಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಶೆಟ್ಟರ್ ಅವರನ್ನು ಸೋಲಿಸಿ ಎಂದು ಕೇಂದ್ರ ಸಚಿವ ಅಮಿತ್ ಶಾ ಕರೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿ, ನನ್ನಿಂದ ಬಿಜೆಪಿಗೆ ಏನು ಅನ್ಯಾಯವಾಗಿದೆ? ನಾನು ಪಕ್ಷವನ್ನು ಸದೃಢವಾಗಿ ಕಟ್ಟಿದ್ದು ತಪ್ಪಾ? ಎಂದು ಪ್ರಶ್ನಿಸಿದ್ದಾರೆ.
ಈ ಕ್ಷೇತ್ರವನ್ನು ನಾನು ರೆಡಿ ಮಾಡಿದ್ದೇನೆ. ಬಿಜೆಪಿ ಸಂಘಟನೆ ಮಾಡಿದ್ದೇನೆ. ನಾನು ಸಂಘಟನೆ ಮಾಡಿದ್ದಕ್ಕೆ ಬಿಜೆಪಿಗೆ ಶಕ್ತಿ ಬಂದಿದೆ. ನನ್ನನ್ನು ಸೋಲಿಸಲು ಯಾರೇ ಬಂದರೂ ಪ್ರಯೋಜನವಾಗುವುದಿಲ್ಲ. ಜನರೇ ನನ್ನನ್ನು ಗೆಲ್ಲಿಸಲು ನಿರ್ಧಾರ ಮಾಡಿದ್ದಾರೆ. ರಾಜ್ಯಪಾಲ, ರಾಜ್ಯಸಭೆ ಸದಸ್ಯನಾಗಲು ನನಗೆ ಇಷ್ಟ ಇಲ್ಲ. ಜನರ ಮಧ್ಯದಲ್ಲಿದ್ದು, ರಾಜಕಾರಣ ಮಾಡಬೇಕು ಎಂದು ಶೆಟ್ಟರ್ ಹೇಳಿದ್ದಾರೆ.