ಗದಗ: ಬಿಜೆಪಿಯಲ್ಲಿ ನಾಯಕನ ಕೊರತೆ ಇದೆ. ಕಾರ್ಯಕರ್ತರಲ್ಲಿಯೇ ಗೊಂದಲ ಆರಂಭವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಗದಗದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಬಿಜೆಪಿ ಈಗ ಲೀಡರ್ ಲೆಸ್ ಪಾರ್ಟಿಯಾಗಿದೆ. ರಾಜ್ಯ ಬಿಜೆಪಿಗೆ ನಾಯಕರಿಲ್ಲ. ಮಾಜಿ ಸಚಿವರು, ಶಾಸಕರು, ಕಾರ್ಯಕರ್ತರಲ್ಲಿಯೂ ಗೊಂದಲವುಂಟಾಗಿದೆ ಎಂದರು.
ರಾಮದುರ್ಗದಲ್ಲಿ ಹಣ ಇದ್ದ ವ್ಯಕ್ತಿಗೆ ಟಿಕೆಟ್ ಕೊಟ್ಟರು. ಬೈಂದೂರು ಸುಕುಮಾರ್ ಶೆಟ್ಟಿಗೆ ಟಿಕೆಟ್ ತಪ್ಪಿಸಿದರು. ಹಿರಿಯ ನಾಯಕರನ್ನು ಕಡೆಗಣಿಸಿದರು. ಚುನಾವಣೆಯಲ್ಲಿ ಸೋತು ಪಕ್ಷಕ್ಕೆ ನಾಯಕನಿಲ್ಲದ ಸ್ಥಿತಿಯಾಗಿದೆ. ಚೀಟಿ ಮೂಲಕವಾದರೂ ತಾತ್ಕಾಲಿಕ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಿ ಎಂದು ಹೇಳಿದರು.
ಬಿಜೆಪಿಯಿಂದ ಅನೇಕ ನಾಯಕರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ಯಾರ್ಯಾರು ಎಂಬುದನ್ನು ಈಗ ಹೇಳಲ್ಲ. ನಿರ್ಧಾರವಾದಾಗ ಹೆಸರು ಹೇಳುತ್ತೇನೆ ಎಂದಿದ್ದಾರೆ.