ಲಂಕಾ ಪ್ರೀಮಿಯರ್ ಲೀಗ್ ನಾಳೆ ಎರಡನೇ ಕ್ವಾಲಿಫಿಯರ್ ನಲ್ಲಿ ಮುಖಾಮುಖಿಯಾಗುತ್ತಿವೆ ಜಾಫ್ನಾ ಕಿಂಗ್ಸ್ ಹಾಗೂ ಕ್ಯಾಂಡಿ ಫಾಲ್ಕನ್ಸ್ | Kannada Dunia | Kannada News | Karnataka News | India News
ಲಂಕಾ ಪ್ರಿಮಿಯರ್ ಲೀಗ್ ಇನ್ನೇನು ಕೊನೆಯ ಘಟ್ಟ ತಲುಪಿದ್ದು, ನಿನ್ನೆ ನಡೆದ ಮೊದಲ ಕ್ವಾಲಿಫಿಯರ್ ಪಂದ್ಯದಲ್ಲಿ ಕ್ಯಾಂಡಿ ಫಾಲ್ಕನ್ಸ್ ತಂಡ ಕೊಲಂಬೋಸ್ ಎದುರು ಕೇವಲ ಎರಡು ವಿಕೆಟ್ ಗಳಿಂದ ರೋಚಕ ಜಯ ಸಾಧಿಸುವ ಮೂಲಕ ಕ್ವಾಲಿಫಿಯರ್ 2 ಗೆ ಎಂಟ್ರಿ ಕೊಟ್ಟಿದೆ. ಕೊಲಂಬೊ ಸ್ಟ್ರೈಕರ್ಸ್ ತಂಡಕ್ಕೆ ತನ್ನ ಓಂ ಗ್ರೌಂಡ್ ನಲ್ಲೇ ಫೈನಲ್ ಪ್ರವೇಶಿಸುವ ಕನಸು ನುಚ್ಚುನೂರಾಗಿದೆ.
ನಾಳೆ ಎರಡನೇ ಕ್ವಾಲಿಫಿಯರ್ ನಲ್ಲಿ ಜಾಫ್ನಾ ಕಿಂಗ್ಸ್ ಹಾಗೂ ಕ್ಯಾಂಡಿ ಫಾಲ್ಕನ್ಸ್ ಮುಖಾಮುಖಿಯಾಗುತ್ತಿದ್ದು, ಗೆದ್ದ ತಂಡ ಫೈನಲ್ ನಲ್ಲಿ ಗಾಲೆ ಮಾರ್ವೆಲ್ಸ್ ತಂಡವನ್ನು ಎದುರಿಸಲಿದೆ. ಹಾಗಾಗಿ ಉಭಯ ತಂಡಗಳಿಗೂ ಇದು ತುಂಬಾ ಮುಖ್ಯವಾದ ಪಂದ್ಯವಾಗಿದ್ದು, ಮತ್ತೊಂದು ರೋಚಕ ಪಂದ್ಯಕ್ಕೆ ಕೊಲಂಬೊ ಕ್ರೀಡಾಂಗಣ ಸಜ್ಜಾಗಿದೆ.