
ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ ಮುಂದುವರಿದ ಪಾಕಿಸ್ತಾನಿ ಮಿಲಿಟರಿ ಕಾರ್ಯಾಚರಣೆಗಳಿಗೆ ಪ್ರತೀಕಾರವಾಗಿ ಬಲೂಚ್ ಲಿಬರೇಶನ್ ಆರ್ಮಿ(ಬಿಎಲ್‌ಎ) 50 ಹೆಚ್ಚು ಒತ್ತೆಯಾಳುಗಳನ್ನು ಗಲ್ಲಿಗೇರಿಸಿರುವುದಾಗಿ ಹೇಳಿಕೊಂಡಿದೆ.
ಪಾಕಿಸ್ತಾನವು ಹಿಂದಿನ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದೆ ಮತ್ತು ಕೈದಿಗಳ ವಿನಿಮಯವನ್ನು ಪ್ರಾರಂಭಿಸಲು ನಿರಾಕರಿಸಿದೆ ಎಂದು ಬಿಎಲ್‌ಎ ಆರೋಪಿಸಿದೆ.
ಪಾಕಿಸ್ತಾನ ಮತ್ತಷ್ಟು ಮಿಲಿಟರಿ ಕ್ರಮ ಕೈಗೊಂಡರೆ ತನ್ನ ವಶದಲ್ಲಿರುವ ಉಳಿದ 150 ಒತ್ತೆಯಾಳುಗಳನ್ನು ತಕ್ಷಣ ಗಲ್ಲಿಗೇರಿಸುವುದಾಗಿ ಬಿಎಲ್‌ಎ ಎಚ್ಚರಿಸಿದೆ. ಕೈದಿಗಳ ವಿನಿಮಯಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನ ಸರ್ಕಾರಕ್ಕೆ ಗುಂಪು 20 ಗಂಟೆಗಳ ಅಂತಿಮ ಗಡುವು ನೀಡಿದೆ.
ಪಾಕಿಸ್ತಾನದ ಡ್ರೋನ್ ದಾಳಿಯ ನಂತರ ಈ ಗುಂಪು 10 ಶತ್ರು ಸಿಬ್ಬಂದಿಯನ್ನು ಗಲ್ಲಿಗೇರಿಸಿತ್ತು. ಇತ್ತೀಚಿನ ಘರ್ಷಣೆಗಳಲ್ಲಿ 100 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ,
ಮಂಗಳವಾರ ಮಾತ್ರ 30 ಜನರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ತನ್ನ ಪ್ರತಿರೋಧವನ್ನು ದೊಡ್ಡ ವಿಮೋಚನಾ ಹೋರಾಟದ ಭಾಗವೆಂದು ಬಣ್ಣಿಸಿರುವ ಬಿಎಲ್‌ಎ, “ನ್ಯಾಯ ಮತ್ತು ಸರಿಯಾದ ತೀರ್ಮಾನ” ಸಾಧಿಸುವವರೆಗೆ ವಿರಮಿಸುವುದಿಲ್ಲ ಎಂದು ಹೇಳಿದೆ.