
ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಹಜಾಕ್ ಮಾಡಿದ್ದು, ರೈಲಿನಲ್ಲಿದ್ದ 6 ಪಾಕಿಸ್ತಾನಿ ಯೋಧರನ್ನು ಗುಂಡಿಟ್ಟು ಹತ್ಯೆ ಮಾಡಿದೆ.
ಬಲೂಚಿಸ್ತಾನಿ ಲಿಬರೇಷನ್ ಆರ್ಮಿ ಎಂಬ ಪ್ರತ್ಯೇಕತಾವಾದಿಗಳ ಗುಂಪು, ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಹೈಜಾಕ್ ಮಾಡಿದ್ದು, ರೈಲಿನಲ್ಲಿದ್ದ 400ಕ್ಕೂ ಹೆಚ್ಚು ಜನರನ್ನು ರೈಲಿನಲ್ಲಿಯೇ ದಿಗ್ಬಂಧನದಲ್ಲಿಟ್ಟಿದೆ. ಇದೇ ರೈಲಿನಲ್ಲಿ ಪಾಕಿಸ್ತಾನದ ಯೋಧರು ಕೂಡ ಪ್ರಯಾಣಿಸುತ್ತಿದ್ದರು.
ಬಿಎಲ್ಎ ಪ್ರತ್ಯೇಕತಾವಾದಿಗಳು ರೈಲನ್ನು ಹಜಾಕ್ ಮಾಡುತ್ತಿದ್ದಂತೆ ಪಾಕಿಸ್ತಾನ ಯೋಧರು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಿಎಲ್ಎ ಹಾಗೂ ಪಾಕ್ ಸೈನಿಕರ ನಡುವೆ ರೈಲಿನಲ್ಲಿಯೇ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಗುಂಡಿನ ದಾಳಿಯಲ್ಲಿ 6 ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.