ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಆಕೆಯ ಮಾಜಿ ಸಹವರ್ತಿ ಸುಖೇಶ್ ಚಂದ್ರಶೇಖರ್ ನಡುವಿನ ಖಾಸಗಿ ಕ್ಷಣಗಳ ಚಿತ್ರವೊಂದು ಸದ್ದು ಮಾಡಿದೆ.
ಇಬ್ಬರ ನಡುವಿನ ಪ್ರಣಯದ ಕ್ಷಣಗಳ ಈ ಚಿತ್ರವು ನಿರೀಕ್ಷಿತವಾಗಿಯೇ ಭಾರೀ ವೈರಲ್ ಆಗಿದ್ದು, ಅವರಿಬ್ಬರ ನಡುವಿನ ಸಂಬಂಧದ ಆಳದ ಪರಿಚಯ ನೀಡಿದೆ. 200 ಕೋಟಿ ರೂ.ಗಳಷ್ಟು ಸಾರ್ವಜನಿಕ ಹಣ ದುರ್ಬಳಕೆ ಆರೋಪದಲ್ಲಿ ಸುಖೇಶ್ ಸದ್ಯ ಜೈಲಿನಲ್ಲಿದ್ದಾನೆ. ಪ್ರಕರಣದಲ್ಲಿ ಜಾಕ್ವೆಲಿನ್‌ರನ್ನು ತನಿಖೆ ವೇಳೆ ಸಹ ಪ್ರಶ್ನಿಸಲಾಗಿದೆ.
ಶಿಕ್ಷಕಿಗೆ ಮುದ್ದಾದ ಭಾಷೆಯಲ್ಲಿ ಧಮ್ಕಿ ಹಾಕಿದ್ಲು ಪುಟ್ಟ ಪೋರಿ..! ವಿಡಿಯೋ ವೈರಲ್
ಈ ಕುರಿತು ಪ್ರತಿಕ್ರಿಯಿಸಿದ ಜಾಕ್ವೆಲಿನ್, “ಈ ದೇಶ ಮತ್ತು ಇಲ್ಲಿನ ಜನತೆ ನನಗೆ ಯಾವಾಗಲೂ ಭಾರೀ ಪ್ರೀತಿ ಮತ್ತು ಗೌರವ ಕೊಟ್ಟಿವೆ. ನಾನೀಗ ಬಹಳ ಸಂಕಷ್ಟದಲ್ಲಿದ್ದು, ನನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಇದು ಗೊತ್ತಾಗುತ್ತಿದೆ ಎಂದುಕೊಂಡಿದ್ದೇನೆ. ಈ ನಂಬಿಕೆಯೊಂದಿಗೇ ನಾನು ನನ್ನ ಮಾಧ್ಯಮ ಮಿತ್ರರಲ್ಲಿ, ನನ್ನ ಖಾಸಗಿತನ ಹಾಗೂ ವೈಯಕ್ತಿಕವಾದ ಚಿತ್ರಗಳನ್ನು ಬಿತ್ತರಿಸದಿರಲು ಕೇಳಿಕೊಳ್ಳುತ್ತೇನೆ. ನೀವು ನಿಮ್ಮದೇ ಪ್ರೀತಿಪಾತ್ರರಿಗೆ ಇದನ್ನೆಲ್ಲಾ ಮಾಡುವುದಿಲ್ಲ, ನನಗೂ ಸಹ ಹೀಗೆ ಮಾಡುವುದಿಲ್ಲ ಎಂದು ನಂಬಿದ್ದೇನೆ. ನ್ಯಾಯ ಹಾಗೂ ಸನ್ನಡತೆ ಗೆಲ್ಲುತ್ತದೆ ಎಂಬ ಭರವಸೆಯೊಂದಿಗೆ. ಧನ್ಯವಾದ,” ಎಂದು ಬರೆದಿದ್ದಾರೆ.