alex Certify ಈ ಪಕ್ಷಿ ಕುಡಿಯೋದು ಸುರಿಯುವ ಮಳೆನೀರನ್ನು ಮಾತ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಪಕ್ಷಿ ಕುಡಿಯೋದು ಸುರಿಯುವ ಮಳೆನೀರನ್ನು ಮಾತ್ರ….!

ಭೂಮಿ ಮೇಲಿರುವ ಅತ್ಯಂತ ವಿಶಿಷ್ಟ ಜೀವಿಗಳಲ್ಲಿ ಒಂದು ಈ ಜಾಕೋಬಿನ್ ಕುಕೂ ಪಕ್ಷಿ. ಪೈಯ್ಡ್ ಕ್ರೆಸ್ಟೆಡ್ ಕುಕೂ ಅಥವಾ ಚಟಕ್ ಎಂದೂ ಕರೆಯಲ್ಪಡುವ ಈ ಪಕ್ಷಿ ಸುರಿಯುತ್ತಿರುವ ಮಳೆ ನೀರನ್ನು ಮಾತ್ರವೇ ಕುಡಿಯುತ್ತದೆ. ಅದೆಷ್ಟೇ ದಾಹವಾದರೂ ಅಷ್ಟೇ ಈ ಪಕ್ಷಿ ಬೇರೆ ರೀತಿಯ ನೀರು ಕುಡಿಯುವುದಿಲ್ಲ, ಸಂಗ್ರಹಿಸಿಟ್ಟ ಮಳೆ ನೀರನ್ನೂ ಕುಡಿಯುವುದಿಲ್ಲ.

ಆಫ್ರಿಕಾ ಮತ್ತು ಏಷ್ಯಾಗಳಲ್ಲಿ ಕಂಡು ಬರುವ ಈ ಪಕ್ಷಿ ಉತ್ತರ ಹಾಗೂ ಕೇಂದ್ರ ಭಾರತದ ಅನೇಕ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಹಿಜಾಬ್ ಬ್ಯಾನ್ ನಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ; ಅಮೆರಿಕಾ

ಈ ಪಕ್ಷಿಗಳು ಮಳೆನೀರಿಲ್ಲದೇ ಬಹು ದಿನಗಳ ಮಟ್ಟಿಗೆ ಬದುಕಬಲ್ಲವು. ದಾಹವಾದ ವೇಳೆ ಈ ಪಕ್ಷಿಗಳು ವರುಣದೇವನನ್ನು ಪ್ರಾರ್ಥಿಸುತ್ತವೆ ಎನ್ನಲಾಗಿದೆ.

ಉದ್ದನೆಯ ಬಾಲ, ಕಪ್ಪು ಮತ್ತು ಬಿಳಿಯ ಮೈಬಣ್ಣದಿಂದ ಕಂಗೊಳಿಸುವ ಈ ಪಕ್ಷಿಗಳು, ಕೋಗಿಲೆಯ ಗಾತ್ರದಲ್ಲಿವೆ. ಈ ಪಕ್ಷಿಯ ವೈಜ್ಞಾನಿಕ ಹೆಸರು ಕ್ಲಾಮೇಟರ್‌ ಜಾಕೋಬಿನ್ಸ್. ಭಾರತದಲ್ಲಿ ಈ ಪಕ್ಷಿಗಳ ಎರಡು ವಿಧಗಳಿವೆ. ದೇಶದ ದಕ್ಷಿಣ ಭಾಗದಲ್ಲಿ ಪೈಯ್ಡ್‌ ಕುಕೂ ವಾಸಿಸುತ್ತದೆ. ಮತ್ತೊಂದು ರೀತಿಯವು ಮಾನ್ಸೂನ್ ಮಾರುತಗಳೊಂದಿಗೆ ಆಫ್ರಿಕಾದಿಂದ ಅರಬ್ಬೀ ಸಮುದ್ರ ದಾಟಿ ಬಂದು ಕೇಂದ್ರ ಮತ್ತು ಉತ್ತರ ಭಾರತದತ್ತ ಬರುತ್ತವೆ.

ಭಾರತದಲ್ಲಿ ಈ ಪಕ್ಷಿ ಮುಖ್ಯವಾಗಿ ಉತ್ತರಾಖಂಡದಲ್ಲಿ ಕಂಡು ಬರುತ್ತದೆ. ರಾಜ್ಯದ ಘರ್ವಾಲ್‌ನಲ್ಲಿ ಈ ಪಕ್ಷಿಯನ್ನು ಚೋಲಿ ಎಂದು ಕರೆಯಲಾಗುವುದು. ಮಾರ್ವಾಡಿ ಭಾಷೆಯಲ್ಲಿ ಈ ಪಕ್ಷಿಯನ್ನು ಚಾಟಕ್ ಎಂದು ಕರೆಯಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...