ಹಲಸಿನ ಹಣ್ಣಿನ ತೊಳೆ 10-15
ಅಕ್ಕಿ ತರಿ – 2 ಕಪ್
ಉಪ್ಪು ರುಚಿಗೆ ತಕ್ಕಷ್ಟು
ತುಪ್ಪ 2 ಚಮಚ
ಗೋಡಂಬಿ ಚೂರು ಸ್ವಲ್ಪ
ಮಾಡುವ ವಿಧಾನ
ಇಡ್ಲಿಗೆ ಬಳಸುವ ಅಕ್ಕಿಯ ತರಿಯನ್ನು ಎರಡು ಗಂಟೆಗಳ ಕಾಲ ನೆನೆಸಿಡಬೇಕು. ಬಳಿಕ ಹಲಸಿನ ತೊಳೆಗಳೊಂದಿಗೆ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.
ಮಿಶ್ರಣಕ್ಕೆ ಕರಿದ ಗೋಡಂಬಿ ಚೂರು ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಇಡ್ಲಿ ಸಿಹಿಯಾಗಿರಬೇಕು ಎಂದರೆ ಬೆಲ್ಲದ ಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಬಹುದು.
ಈಗ ಇಡ್ಲಿ ತಟ್ಟೆಗೆ ತುಪ್ಪ ಸವರಿ ಮಿಶ್ರಣವನ್ನು ಹಾಕಿ ಹತ್ತು-ಹದಿನೈದು ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ ತುಪ್ಪದ ಜೊತೆ ಹಲಸಿನ ಇಡ್ಲಿಯನ್ನು ಸವಿಯಿರಿ.