
ಮೊಡವೆ ಸಮಸ್ಯೆ
ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಹಲಸಿನ ಹಣ್ಣಿನ ಪೇಸ್ಟ್ ತಯಾರಿಸಿಕೊಂಡು ಮೊಡವೆಗಳಿಗೆ ಹಚ್ಚಿ. ಇದರಿಂದ ಮೊಡವೆಗಳು ಮಾಯವಾಗುವುದಲ್ಲದೇ ಮತ್ತೆ ಮೊಡವೆಗಳು ಏಳದಂತೆ ತಡೆಯುತ್ತದೆ.
ನೆರಿಗೆ ಸಮಸ್ಯೆಗೆ
ನೆರಿಗೆಗಳಿಂದ ದೂರಾಗಲು ಹಲಸಿನ ಹಣ್ಣಿನ ಪೇಸ್ಟ್ಗೆ ಒಂದು ಚಮಚ ಹಾಲನ್ನು ಸೇರಿಸಿ ಮಿಶ್ರಮಾಡಿ ಕೊಂಡು ನೆರಿಗೆಗಳ ಭಾಗಕ್ಕೆ ಹಚ್ಚಿಕೊಳ್ಳಿ. ನಂತರ 10 ನಿಮಿಷಗಳ ಬಳಿಕ ಮುಖವನ್ನು ತಣ್ಣಗಿನ ನೀರಿನಿಂದ ತೊಳೆದುಕೊಂಡು ಐಸ್ ನಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.
ಕಪ್ಪು ಕಲೆಗಳಿಗೆ
ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಲು ಹಲಸಿನ ಹಣ್ಣು ಮತ್ತು ಬೀಜವನ್ನು ನುಣ್ಣಗೆ ಅರೆದುಕೊಂಡು ಇದನ್ನು ಮೇಲ್ಮುಖವಾಗಿ ಕಪ್ಪು ಕಲೆಗಳ ಮೇಲೆ ಹಚ್ಚಿಕೊಳ್ಳಿ. 10 ನಿಮಿಷಗಳ ನಂತರ ಮುಖವನ್ನು ತೊಳೆದುಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು.