ಕೆಲವರಿಗೆ ಸೆಲೆಬ್ರಿಟಿಗಳೆಂದರೆ ತುಂಬಾ ಪ್ರೀತಿ. ಅವರು ತಮ್ಮಷ್ಟೇ ತಮ್ಮ ನೆಚ್ಚಿನ ಸೆಲೆಬ್ರಿಟಿಯನ್ನು ಪ್ರೀತಿಸುತ್ತಿರುತ್ತಾರೆ ಹಾಗೂ ಗೌರವಿಸುತ್ತಿರುತ್ತಾರೆ. ಅವರನ್ನು ಜೀವಮಾನದಲ್ಲಿ ಒಮ್ಮೆಯಾದರೂ ಕಂಡು, ಅವರಿಂದ ಸೆಲ್ಫಿ, ಫೋಟೋ ಅಥವಾ ಆಟೋಗ್ರಾಫ್ ಪಡೆಯಲು ಹಾತೊರೆಯುತ್ತಾರೆ.
ಇದರೆ ಇಂತಹ ಸಂದರ್ಭಗಳು ಒಮ್ಮೊಮ್ಮೆ ತುಂಬಾ ತಮಾಷೆಯಾಗಿರುತ್ತದೆ. ಇಂತಹ ಘಟನೆಯೊಂದು ನಡೆದಿದ್ದು, ಇಂತಹ ತಮಾಷೆಯ ಆಟೋಗ್ರಾಫ್ ಕ್ರಿಕೆಟ್ ಅಂಗಳದಲ್ಲಿ ನಡೆದಿದ್ದು, ಅಭಿಮಾನಿ ಕೂಡ ತುಂಬಾ ಖುಷಿ ಪಟ್ಟಿದ್ದಾನೆ. ಅಲ್ಲದೇ, ಇದಕ್ಕೆ ಅಲ್ಲಿದ್ದವರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಸಂದರ್ಭದಲ್ಲಿ ಫೀಲ್ಡಿಂಗ್ ನಲ್ಲಿ ಇಂಗ್ಲೆಂಡ್ ನ ಬೌಲರ್ ಜಾಕ್ ಲೀಚ್ ಬೌಂಡರಿ ಲೈನ್ ನಲ್ಲಿ ನಿಂತಿದ್ದರು. ಆಗ ಅಭಿಮಾನಿಯೊಬ್ಬ ಇವರ ಬಳಿ ಆಟೋಗ್ರಾಫ್ ಕೇಳಿದ್ದಾನೆ.
ಈ ಸಂದರ್ಭದಲ್ಲಿ ಅಭಿಮಾನಿಯ ಬಳಿ ಹೋಗಿರುವ ಜಾಕ್, ಅಭಿಮಾನಿಯ ಬೋಳು ತಲೆಯ ಮೇಲೆಯೇ ಆಟೋಗ್ರಾಫ್ ಹಾಕಿದ್ದಾರೆ. ಇದನ್ನು ಕಂಡ ಕೂಡಲೇ ಅಲ್ಲಿದ್ದವರು ಚಪ್ಪಾಳೆ ತಟ್ಟಿ ಖುಷಿ ಪಟ್ಟು ತಮಾಷೆ ಮಾಡಿದ್ದಾರೆ. ಈ ದೃಶ್ಯ ಕೂಡ ಪಂದ್ಯದ ನೇರ ಪ್ರಸಾರವಾಗುತ್ತಿದ್ದ ಪರದೆಯ ಮೇಲೆಯೂ ಬಿತ್ತರವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಜನರು ತಮಾಷೆ ಮಾಡುತ್ತಿದ್ದಾರೆ.