
ದಾಖಲೆಗಳನ್ನು ಪರಿಶೀಲಿಸದೆ ಪೊಲೀಸರು ಚಲನ್ ನೀಡಿರುವುದು ಹೇಗೆ ಎಂದು ಸಂತ್ರಸ್ತ ಪ್ರಶ್ನಿಸಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿರುವ ಅವರು, ಪೊಲೀಸರು ಜಾಗರೂಕರಾಗಿದ್ದರೆ ಮತ್ತು ವಾಹನದ ದಾಖಲೆಗಳನ್ನು ಕೇಳಿದ್ದರೆ, ತಮ್ಮ ದ್ವಿಚಕ್ರ ವಾಹನವನ್ನು ಮರಳಿ ಪಡೆಯಬಹುದಿತ್ತು ಎಂದಿದ್ದಾರೆ.
ಮಾಹಿತಿಯ ಪ್ರಕಾರ, 2024 ರ ಅಕ್ಟೋಬರ್ 26 ರಂದು ಜಬಲ್ಪುರದಲ್ಲಿರುವ ಮನೆಯಿಂದ ತನ್ನ ದ್ವಿಚಕ್ರ ವಾಹನವನ್ನು ಕದ್ದೊಯ್ಯಲಾಗಿದೆ ಎಂದು ಯುವಕನೊಬ್ಬ ಶಹಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸರಿಯಾಗಿ ಒಂದು ತಿಂಗಳ ನಂತರ, ಅಂದರೆ 26 ನವೆಂಬರ್ 2024 ರಂದು ತಮ್ಮ ವಾಹನದ ವಿರುದ್ಧ 500 ರೂ.ಗಳ ಚಲನ್ ಅನ್ನು ಹೊರಡಿಸಲಾಗಿದೆ ಎಂಬ ಸಂದೇಶವನ್ನು ಸ್ವೀಕರಿಸಿದ್ದರು.
ವಿವರಗಳನ್ನು ಪರಿಶೀಲಿಸಿದಾಗ ಎಸ್ಐ ವಿಜಯ್ ಪುಷ್ಪ್ ಅವರು ಕದ್ದ ವಾಹನಕ್ಕೆ ಚಲನ್ ನೀಡಿರುವುದು ತಿಳಿದು ಬಂದಿದೆ. ಕಳ್ಳರು ವಾಹನವನ್ನು ಚಲಾಯಿಸುತ್ತಿದ್ದು ಮತ್ತು ಹಣವನ್ನು ಸಹ ಪಾವತಿಸಿದ್ದಾರೆ. ಪೊಲೀಸರು ದಾಖಲೆಗಳನ್ನು ಪರಿಶೀಲಿಸದೆ ವಾಹನಕ್ಕೆ ಚಲನ್ ಅನ್ನು ಹೇಗೆ ನೀಡುತ್ತಾರೆ ಎಂದು ವಾಹನದ ಮಾಲೀಕ ಪ್ರಶ್ನಿಸಿದ್ದಾರೆ.
ಪೊಲೀಸರು ತಮ್ಮ ಕೆಲಸವನ್ನು ಸಮರ್ಥವಾಗಿ ಮಾಡಿ ವಾಹನದ ಪೇಪರ್ಗಳನ್ನು ಕೇಳಿದ್ದರೆ ಆ ವಾಹನ ಅವರದ್ದೇ ಎಂಬುದು ಗೊತ್ತಾಗುತ್ತಿತ್ತು. ಅಂತೆಯೇ, ಪೊಲೀಸ್ ಪೋರ್ಟಲ್ನಲ್ಲಿ ದೂರು ದಾಖಲಿಸಲಾಗಿದೆ ಮತ್ತು ಅದು ಕದ್ದ ವಾಹನ ಎಂದು ಪರಿಶೀಲಿಸಲು ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
#WATCH | Jabalpur Traffic Police Issues Challan Of Stolen Vehicle Without Asking For Documents During Checking, Complainant Approaches SP Office #MadhyaPradesh #Jabalpur #MPNews #TrafficPolice pic.twitter.com/lbUbfb3vVW
— Free Press Madhya Pradesh (@FreePressMP) November 30, 2024