ತಾನೂ ಪ್ರೀತಿಸಿದ ಭಾರತದ ನೋಯ್ಡಾದ ವ್ಯಕ್ತಿಯೊಂದಿಗೆ ಇರಲು ಅಂತರರಾಷ್ಟ್ರೀಯ ಗಡಿಗಳನ್ನು ದಾಟಿದ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಮತ್ತೆ ಸುದ್ದಿಯಲ್ಲಿದ್ದಾಳೆ. ಆದರೆ ಈ ಬಾರಿ ಅದು ತನ್ನ ಮೈದುನನ ವಕ್ರ ಮನಸ್ಥಿತಿಯಿಂದಾಗಿ.
ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಸಂದರ್ಶನವೊಂದರಲ್ಲಿ ಸಚಿನ್ ಮೀನಾ ಅವರ ಕಿರಿಯ ಸಹೋದರ ಸೀಮಾ ಹೈದರ್ನ್ನು ವಿಷಕಾರಿ ಹಾಗೂ ಮಸ್ತ್ ಎಂದು ಕರೆಯುವುದು ಕೇಳಿಬಂದಿದೆ.
ವರದಿಗಾರರೊಬ್ಬರು ಸೀಮಾ ಅವರನ್ನು ಭೇಟಿಯಾಗಿದ್ದೀರಾ ಎಂದು ಕೇಳಿದ್ದಾರೆ. ಈ ಸಂದರ್ಭದಲ್ಲಿ ಮೈದುನ ಸೀಮಾ ಹೈದರ್ ನ್ನು ನೋಟದಿಂದ ವಿವರಿಸುತ್ತಾರೆ. ಮೈದುನ ತನ್ನ ಅತ್ತಿಗೆಯೊಂದಿಗೆ ಮಜಾ ಮಾಡಿಲ್ಲ ಎಂದರೆ ಅತ್ತಿಗೆಯನ್ನು ಆನಂದಿಸುವವರು ಇನ್ಯಾರು ಎಂದು ಪ್ರಶ್ನಿಸಿದ್ದಾನೆ.
ಆದ್ರೆ ಮಹಿಳೆಯ ಮೇಲೆ ಈ ರೀತಿಯ ಅಸಹ್ಯಕರವಾದ ಕಾಮೆಂಟ್‌ಗಳಿಗಾಗಿ ಯುವಕನನ್ನು ಅನೇಕರು ದೂಷಿಸುವ ಮೂಲಕ ವೀಡಿಯೊಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೆಲವರು ಅವನ ಮನಸ್ಥಿತಿಯನ್ನು ಅತ್ಯಾಚಾರಿ ಎಂದೂ ಕರೆದಿದ್ದಾರೆ.
ಇನ್ನು ಸೀಮಾ ಮತ್ತು ಸಚಿನ್ ಪ್ರೇಮದ ಬಗ್ಗೆ ತಿಳಿಯುವುದಾದರೆ ಇವರಿಬ್ಬರು ನೇಪಾಳದ ಕಠ್ಮಂಡುವಿನಲ್ಲಿ ಮೊದಲ ಬಾರಿಗೆ ಭೇಟಿಯಾದರು. ಅಲ್ಲಿ ಅವರು ರಹಸ್ಯವಾಗಿ ವಿವಾಹವಾದರು. ಇದಾದ ಬಳಿಕ ಸೀಮಾ ಮತ್ತೆ ಪಾಕಿಸ್ತಾನಕ್ಕೆ ಹೋದಳು. ಅಲ್ಲಿ ಅವಳು 12 ಲಕ್ಷಕ್ಕೆ ಪ್ಲಾಟ್ ಅನ್ನು ಮಾರಾಟ ಮಾಡಿದಳು. ಅವಳ ಮಕ್ಕಳಿಗೆ ಮತ್ತು ಅವಳಿಗೆ ವಿಮಾನ ಟಿಕೆಟ್‌ಗಳನ್ನು ವ್ಯವಸ್ಥೆಗೊಳಿಸಿದಳು.
ಇನ್ನು ಬಲವಂತದ ಮತಾಂತರ ವದಂತಿಗಳ ಬಗ್ಗೆ ಸೀಮಾ ಉತ್ತರ ನೀಡಿದ್ದು ನನ್ನ ಸ್ವಂತ ಇಚ್ಛೆಯ ಮೇರೆಗೆ ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ಏಕೆಂದರೆ ನನ್ನ ಪತಿ ಸಚಿನ್ ಹಿಂದೂ ಆಗಿದ್ದಾನೆ. ಯಾರೂ ನನ್ನನ್ನು ಮತಾಂತರಗೊಳ್ಳುವಂತೆ ಒತ್ತಾಯಿಸಲಿಲ್ಲ ಎಂದಿದ್ದಾಳೆ.
ತನ್ನ ಮಕ್ಕಳಿಗೆ ರಾಜ್, ಪ್ರಿಯಾಂಕಾ, ಪರಿ, ಮತ್ತು ಮುನ್ನಿ ಎಂದು ಹೆಸರಿಟ್ಟಿದ್ದಾಳೆ. ಸದ್ಯ ಸಚಿನ್ ಮತ್ತು ಅವರ ಪೋಷಕರು ಸೀಮಾ ಮತ್ತು ಅವರ ಮಕ್ಕಳನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ಸಚಿನ್ ಅವರ ಪೋಷಕರು ಹಿಂದೂ ರೀತಿಯಲ್ಲಿ ದಂಪತಿಗಳಿಗೆ ಅಧಿಕೃತ ವಿವಾಹ ಕಾರ್ಯಕ್ರಮವನ್ನು ಸಹ ಯೋಜಿಸುತ್ತಿದ್ದಾರೆ.