ಯೋಗ ಗುರು ಬಾಬಾ ರಾಮದೇವ್ ಅವರು ದೇಶದಲ್ಲಿ ಹಲವಾರು ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸ್ವದೇಶಿ ಕ್ರಾಂತಿ ಆರಂಭಿಸಿದ್ದಾರೆ. ಅದರಲ್ಲೂ, ಅವರ ಪತಂಜಲಿ ಸಂಸ್ಥೆಯು ದೇಶದ ಅಗ್ರ ಸಂಸ್ಥೆಗಳಲ್ಲಿ ಒಂದಾಗಿದೆ.
ಬಾಬಾ ರಾಮದೇವ್ ಅವರ ಒಡೆತನದ ಖಾದ್ಯತೈಲ ಕಂಪನಿಯಾದ ರುಚಿ ಸೋಯಾ ಇಂಡಸ್ಟ್ರೀಸ್ ಈಗ ಷೇರುಗಳನ್ನು ಫಾಲೋ-ಆನ್ ಪಬ್ಲಿಕ್ ಆಫರ್ ಆಫರ್ (ಎಫ್‌ಪಿಒ) ಅಡಿಯಲ್ಲಿ ಮಾರಾಟ ಮಾಡಲು ತೀರ್ಮಾನಿಸಿದೆ. ಹಾಗಾಗಿ, ಬಾಬಾ ರಾಮದೇವ್ ಅವರ ಕಂಪನಿಯಲ್ಲಿ ಹೂಡಿಕೆ ಮಾಡಲು ಇದು ಸಕಾಲ ಎಂದೇ ಹೇಳಲಾಗುತ್ತಿದೆ.
ಸೋಯಾ ರುಚಿ ಇಂಡಸ್ಟ್ರೀಸ್ ಕಂಪನಿಯ 4,300 ಕೋಟಿ ರೂ. ಮೌಲ್ಯದ ಎಫ್‌ಪಿಒ ಮಾರ್ಚ್ 24ರಿಂದ ಆರಂಭವಾಗಿ ಮಾರ್ಚ್ 28ರಂದು ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ಷೇರುಗಳನ್ನು ಕೊಂಡುಕೊಳ್ಳುವವರು ಆಸಕ್ತಿ ತೋರಬಹುದಾಗಿದೆ. ಅದರಲ್ಲೂ ಒಂದು ಷೇರ್ ಬೆಲೆಯನ್ನು ಕಂಪನಿಯು 615-650 ರೂ. ಎಂದು ನಿಗದಿಪಡಿಸಿದ್ದು, ಹೂಡಿಕೆ ಮಾಡುವವರಿಗೆ ಅನುಕೂಲ ಎಂದೇ ಹೇಳಲಾಗುತ್ತಿದೆ.
ಗುರುವಾರದ ಷೇರು ವಹಿವಾಟು ಅಂತ್ಯಕ್ಕೆ ಬಿಎಸ್‌ಇಯಲ್ಲಿ ಸೋಯಾ ರುಚಿಯ ಒಂದು ಷೇರಿನ ಬೆಲೆಯು 1,004 ರೂ. ಇತ್ತು. ಇತ್ತೀಚೆಗೆ ಷೇರಿನ ಮೌಲ್ಯವು ಮೊದಲಿಗಿಂತ ಉತ್ತಮವಾಗಿರುವುದರಿಂದ ಖರೀದಿ ಮಾಡುವವರಿಗೆ ಅನುಕೂಲ ಎಂದು ವಿಶ್ಲೇಷಿಸಲಾಗಿದೆ.
ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯು 2019ರಲ್ಲಿ ಸೋಯಾ ರುಚಿ ಇಂಡಸ್ಟ್ರೀಸ್ ಕಂಪನಿಯನ್ನು ಪತಂಜಲಿ ಜತೆ ವಿಲೀನಗೊಳಿಸಿದೆ. ಇದು ದೇಶದ ಪ್ರಮುಖ ಖಾದ್ಯ ತೈಲ ಕಂಪನಿಗಳಲ್ಲಿ ಒಂದು ಎಂಬ ಹೆಸರು ಗಳಿಸಿದೆ. ಅದರಲ್ಲೂ, ಬಾಬಾ ರಾಮದೇವ್ ಅವರ ಹಲವು ಉದ್ಯಮಗಳು ಇರುವುದರಿಂದ ಹೂಡಿಕೆದಾರರ ವಿಶ್ವಾಸವನ್ನೂ ಗಳಿಸಿದೆ.