ನವದೆಹಲಿ: ಭಾರತದಲ್ಲಿ ವೈದ್ಯಕೀಯ ಆಮ್ಲಜನಕ ಸಾಕಷ್ಟು ಲಭ್ಯವಿದ್ದರೂ, ಕೊರೋನಾ ರೋಗಿಗಳು ಎದುರಿಸುತ್ತಿರುವ ಕೊರತೆ ನಡುವೆ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯವರು ಮಾತನಾಡಿ, ಆಮ್ಲಜನಕ ಸಾಗಣೆಗೆ ಸಾರಿಗೆಯ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗಿದೆ. ಆಮ್ಲಜನಕ ಕೊರತೆಗಾಗಿ ಭಯಪಡುವ ಅಗತ್ಯವಿಲ್ಲ. ಆಮ್ಲಜನಕ ಸಾಗಣೆಗೆ ಸಾರಿಗೆಯ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗಿದೆ. ಆಕ್ಸಿಜನ್ ಟ್ಯಾಂಕರ್ ಗಳನ್ನು ವಿದೇಶದಿಂದ ಖರೀದಿ ಅಥವಾ ಗುತ್ತಿಗೆ ಆಧಾರದ ಮೇಲೆ ಪಡೆಯಲಾಗುತ್ತಿದೆ. ಆದರೂ ಆಮ್ಲಜನಕ ಟ್ಯಾಂಕರ್ ಗಳ ಸಾಗಣೆ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.
ನಿಗದಿತ ಸಮಯಕ್ಕೆ ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡಲು ಜಿಪಿಎಸ್ ಮೂಲಕ ಟ್ಯಾಂಕರ್ ಗಳ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಆದಷ್ಟು ಶೀಘ್ರವೇ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಇನ್ನು ಜನರು ಮನೆಗಳಲ್ಲಿಯೂ ಮಾಸ್ಕ್ ಧರಿಸಲು ಪ್ರಾರಂಭಿಸುವ ಸಮಯ ಇದಾಗಿದೆ. ಜನ ತಮ್ಮ ಮನೆಯೊಳಗೆ ಮಾಸ್ಕ್ ಧರಿಸಬೇಕು. ಕೊರೋನಾ ಎರಡನೆಯ ಅಲೆ ದೇಶಕ್ಕೆ ಅಪ್ಪಳಿಸಿದೆ ಎಂದು ಸರ್ಕಾರ ಹೇಳಿದೆ. ಅನಗತ್ಯ ಭೀತಿ ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿ ಉಂಟುಮಾಡುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬರಬಾರದು. ಕುಟುಂಬದೊಳಗಿನವರು ಸಹಕರಿಸುವುದು ಮುಖ್ಯವಾಗಿದೆ. ಯಾರನ್ನು ನಿಮ್ಮ ಮನೆಗೆ ಆಹ್ವಾನಿಸಬಾರದು. ಇನ್ನು ಲಸಿಕೆ ನೀಡಿಕೆ ವೇಗ ಕಡಿಮೆಯಾಗಲು ನಾವು ಅನುಮತಿಸುವುದಿಲ್ಲ. ವ್ಯಾಕ್ಸಿನೇಷನ್ ನೀಡಿಕೆ ಕಾರ್ಯ ಇನ್ನೂ ಹೆಚ್ಚಿಸಬೇಕು ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ. ಪೌಲ್ ಹೇಳಿದ್ದಾರೆ.
ಅನೇಕರು ಭೀತಿಯಿಂದ ಆಸ್ಪತ್ರೆ ಸೇರಿಕೊಂಡಿದ್ದಾರೆ. ಇದರಿಂದ ಹಾಸಿಗೆ ಕೊರತೆ ಕಂಡುಬಂದಿದೆ. ವೈದ್ಯರ ಸಲಹೆ ಮೇರೆಗೆ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು ಎಂದು ಹೇಳಲಾಗಿದೆ. ಯಾವುದೇ ಭೌತಿಕ ದೂರದ ಕ್ರಮಗಳನ್ನು ಅನುಸರಿಸದಿದ್ದರೆ ಒಬ್ಬ ವ್ಯಕ್ತಿಯು 30 ದಿನದಲ್ಲಿ 406 ಜನರಿಗೆ ಸೋಂಕು ತಗಲಿಸಬಹುದು ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.