ಒಂದು ದಿನ ಬೆಳಿಗ್ಗೆ ನಿದ್ದೆಯಿಂದ ಕಣ್ಣುಜ್ಜಿಕೊಂಡು ಎದ್ದ ಕೂಡಲೇ ನಿಮ್ಮ ಮೊಬೈಲ್ನಲ್ಲಿ 2 ಕೋಟಿ ರೂ. ಜಮಾ ಆಗಿರುವ ಎಸ್ಎಂಎಸ್ ಸಂದೇಶ ನೋಡಿದರೆ ಹೇಗಿರಬೇಡ ನಿಮ್ಮ ಸ್ಥಿತಿ !
ಒಬ್ಬ ವ್ಯಕ್ತಿಗೆ ಹೀಗೆಯೇ ಆಗಿದೆ. ಸೆೈಬರ್ ಸೆಕ್ಯುರಿಟಿ ವೃತ್ತಿಪರರಾಗಿರುವ ಸ್ಯಾಮ್ ಕರಿ ತಮ್ಮ ಅನುಭವವನ್ನು ಟ್ವೀಟರ್ನಲ್ಲಿ ಹಂಚಿಕೊಂಡಿದ್ದು, ಗೂಗಲ್ನಿಂದ ಸುಮಾರು 2,50,000 ಡಾಲರ್ ಪಾವತಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಗೂಗಲ್ ಈ ಹಣ ಕಳುಹಿಸಿ 3 ವಾರಗಳು ಕಳೆದಿವೆ, ನಾನು ಇನ್ನೂ ಏಕೆ ಬಂತೆಂದು ಕೇಳಿಲ್ಲ. ನಾವು ಗೂಗಲ್ ಅನ್ನು ಸಂಪರ್ಕಿಸಲು ಯಾವುದಾದರೂ ಮಾರ್ಗವಿದೆಯೇ? ಎಂದು ಜಾಲತಾಣದಲ್ಲಿ ಪ್ರಶ್ನಿಸಿದ್ದರು.
ಕರಿ ಕೆಲವೊಮ್ಮೆ ಗೂಗಲ್ನಂತಹ ಕಂಪನಿಗಳಿಗೆ ಬಗ್ ಬೌಂಟಿ ಹಂಟಿಂಗ್ ನಡೆಸುತ್ತಾರೆ ಎಂದು ಹೇಳಿಕೊಂಡಿದ್ದಾರೆ, ಇದು ತಂತ್ರಜ್ಞಾನ ಸಂಸ್ಥೆಗಳಿಗೆ ಸಹಾಯ ಮಾಡಲು ಪಾವತಿಸುವ ವ್ಯವಸ್ಥೆಯಾಗಿದೆ.
ಸ್ಟಾರ್ ವೇರ್ ನಲ್ಲಿನ ದೋಷಗಳನ್ನು ಕಂಡುಹಿಡಿದು ಕೊಟ್ಟಾಗ ಇಂತಹ ಕೊಡುಗೆ ಸಿಗುತ್ತದೆ. ಆದರೆ ಗೂಗಲ್ ಆ ಹಣವನ್ನು ತಪ್ಪಾಗಿ ಕಳುಹಿಸಿದೆ ಎಂಬ ಅವರ ಅನುಮಾನ ಸರಿಯಾಯಿತು.
ಗೂಗಲ್ ವಕ್ತಾರರು ಹೇಳಿಕೆ ನೀಡಿ, “ನಮ್ಮ ತಂಡವು ಇತ್ತೀಚೆಗೆ ಮಾನ್ಯುಯಲ್ ದೋಷದ ಪರಿಣಾಮವಾಗಿ ತಪ್ಪು ವ್ಯಕ್ತಿಗೆ ಪಾವತಿ ಮಾಡಿದೆ. ಅದನ್ನು ಸರಿಪಡಿಸಲು ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ.