ಪ್ರತಿವರ್ಷದ ಜೂನ್ ತಿಂಗಳನ್ನು ’ಹೆಮ್ಮೆಯ ತಿಂಗಳು’ ಎಂದು ಆಚರಿಸಲಾಗುತ್ತದೆ. ಸಲಿಂಗಿ ಸಮುದಾಯದ ಮಂದಿ ಎದುರಿಸುತ್ತಿರುವ ಸವಾಲುಗಳ ಕುರಿತಂತೆ ಜಾಗೃತಿ ಮೂಡಿಸಲು ಹಾಗೂ ಅವರಿಗೂ ಎಲ್ಲರಂತೆ ಸಹಜ ಬದುಕು ಬಾಳಲು ಪ್ರೇರಣೆ ನೀಡುವ ಉದ್ದೇಶದಿಂದ ಈ ಮಾಸವನ್ನು ಆಚರಣೆ ಮಾಡಲಾಗುತ್ತದೆ.
ಹೃದಯಸ್ಪರ್ಶಿ ವಿಡಿಯೋವೊಂದರಲ್ಲಿ 73 ವರ್ಷದ ವ್ಯಕ್ತಿಯೊಬ್ಬರು ಸಲಿಂಗಿಯಾಗಿ ಬದಲಾಗಿ ಬಂದು ತಮ್ಮ ಮನೆಯ ಮುಂದೆ ಹೆಮ್ಮೆಯ ಧ್ವಜಗಳನ್ನು ನೆಡುತ್ತಿರುವುದನ್ನು ಕಂಡ ನೆಟ್ಟಿಗ ಸಮುದಾಯ ಆತನಿಗೆ ಮಾನಸಿಕ ಬೆಂಬಲ ಕೊಟ್ಟಿದೆ. ’ನೆಕ್ಸ್ಟ್‌ಡೋರ್’ ಹೆಸರಿನ ಇನ್‌ಸ್ಟಾಗ್ರಾಂ ಪುಟವೊಂದರಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.
ತನ್ನ ಈ ನಿರ್ಧಾರಕ್ಕೆ ತನ್ನದೇ ಕುಟುಂಬ ಬೆಂಬಲ ಕೊಡದೇ ಇರುವ ಕಾರಣ ಈ ವ್ಯಕ್ತಿಗೆ ಭಾರೀ ಬೇಸರವಾಗಿದೆ. ಈ ವೇಳೆ ಈ ವ್ಯಕ್ತಿಯ ನೆರೆಯ ಮನೆಯವರು ಆತನ ಮನೆಯ ಮುಂದೆ ಹೆಮ್ಮೆಯ ಧ್ವಜ ನೆಟ್ಟು ಆತನಿಗೆ ಬೆಂಬಲ ಕೊಟ್ಟಿದ್ದಾರೆ.
https://www.instagram.com/p/CPlDYz8DR0e/?utm_source=ig_web_copy_link