ಮಿಯಾಜ಼ಾಕಿ ಮಾವಿನಹಣ್ಣುಗಳು ಎಂದರೆ ಸಾಮಾನ್ಯವಾದ ಮಾವುಗಳಲ್ಲ. ಜಪಾನ್‌ನ ಮಿಯಾಜ಼ಾಕಿ ಪ್ರಿಫೆಕ್ಚರ್‌ನಲ್ಲಿ ಬೆಳೆಯುವ ಈ ಹಣ್ಣುಗಳಿಗೆ ಅಂತರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಿದೆ. ಇತ್ತೀಚೆಗೆ ಇಂಥ ಎರಡು ಮಾವಿನಹಣ್ಣುಗಳನ್ನು $3000ಕ್ಕೆ (2.5 ಲಕ್ಷ ರೂ.) ಮಾರಾಟ ಮಾಡಲಾಗಿದೆ.
ಮಧ್ಯಪ್ರದೇಶದ ಜೋಡಿಯೊಂದು ಜಬಾಲ್ಪುರದಲ್ಲಿರುವ ತಮ್ಮ ತೊಟದಲ್ಲಿ ಈ ಮಿಯಾಜ಼ಾಕಿ ಮಾವುಗಳನ್ನು ಬೆಳೆಯುತ್ತಿದ್ದಾರೆ. “ಅದು ಜೆಲ್ಲಿ ಥರ ಇರುತ್ತದೆ. ಈ ಹಣ್ಣನ್ನು ಅದರ ಸಿಪ್ಪೆಯೊಂದಿಗೆ ತಿನ್ನಬಹುದು. ಹಣ್ಣಿನ ತಿರುಳು ಬಾಯಲ್ಲಿ ಕರಗಲಿದ್ದು, ಬಹಳ ಸಿಹಿಯಾಗಿರುತ್ತದೆ” ಎನ್ನುತ್ತಾರೆ ಬೆಳೆಗಾರ ಸಂಕಲ್ಪ್ ಪರಿಹಾರ್.
‘ಲಿಂಗಾಯತರಲ್ಲಿ ಸಿಎಂ ಸ್ಥಾನಕ್ಕೆ ಪರ್ಯಾಯ ನಾಯಕರಿಲ್ಲ ಎನ್ನುವುದು ಸುಳ್ಳು, ಅನೇಕ ಅರ್ಹರು ಇದ್ದಾರೆ’
ರಾಣಿ ಹಾಗೂ ಸಂಕಲ್ಪ್ ಪರಿಹಾರ್ ದಂಪತಿ ತಾವು ಕೆಲ ವರ್ಷಗಳ ಹಿಂದೆ ಬರೀ ಎರಡು ಮಾವಿನ ಸಸಿಗಳನ್ನು ಬೆಳೆಯಲು ಆರಂಭಿಸಿದ್ದಾಗಿಯೂ, ಅದು ತಮಗೇ ಅಚ್ಚರಿಯಾಗುವ ಹಾಗೆ ಜಪಾನ್‌ನ ಮಿಯಾಜ಼ಾಕಿ ತಳಿಯದ್ದೆಂದು ನಂತರ ತಿಳಿದುಬಂದದ್ದಾಗಿ ಹೇಳಿದ್ದಾರೆ.
ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಂದ ತಮಗೆ ಈ ಸಸಿಗಳು ಸಿಕ್ಕಿದ್ದಾಗಿ ಪರಿಹಾರ್ ತಿಳಿಸಿದ್ದು, ಆ ವೇಳೆಯಲ್ಲಿ ಅವು ಮಯಾಜ಼ಾಕಿ ಮಾವಿನ ಸಸಿಗಳು ಎಂದು ಗೊತ್ತಿರಲಿಲ್ಲ ಎಂದಿದ್ದಾರೆ.
ಬೆಣ್ಣೆಯಂತೆ ಕರಗುವ ‘ಗೋಧಿ ಹಲ್ವಾ’ ಸವಿಯಿರಿ
ತಾವು ಬೆಳೆದ ಒಂದೇ ಒಂದು ಮಾವಿನ ಹಣ್ಣಿಗೆ 21,000 ರೂಪಾಯಿಯಷ್ಟು ಬೆಲೆ ಕೊಡುವುದಾಗಿ ಹೇಳಿಕೊಂಡು ಅನೇಕ ಮಂದಿ ಸಂಪರ್ಕಿಸಿದ್ದಾಗಿ ರಾಣಿ ತಿಳಿಸಿದ್ದಾರೆ.
ಕಳೆದ ವರ್ಷ ಮಾರುಕಟ್ಟೆಯಲ್ಲಿ 2.70 ಲಕ್ಷ ರೂ./ಕಿಲೋ ದರದಲ್ಲಿ ಮಾರಾಟವಾದ ಮಿಯಾಜ಼ಾಕಿ ಮಾವಿನ ಹಣ್ಣು ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ.