ಬ್ರಿಟನ್‌ನ ಕೇಂಬ್ರಿಡ್ಜ್ ಶೈರ್‌ನ ಮರವೊಂದಕ್ಕೆ ಸುತ್ತಿಕೊಂಡಿದ್ದ 10 ಅಡಿ ಉದ್ದದ ಹೆಬ್ಬಾವೊಂದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ದೃಶ್ಯವನ್ನು ’ದಿ ಜಂಗಲ್ ಬುಕ್’ನ ದೃಶ್ಯವೊಂದರ ಜೊತೆಗೆ ಹೋಲಿಕೆ ಮಾಡಿದ್ದಾರೆ.
2016ರ ಈ ಚಿತ್ರದಲ್ಲಿ ಕಥಾನಾಯಕ ಮೋಗ್ಲಿ ದಟ್ಟ ಕಾಡುಗಳ ನಡುವೆ ಅಲೆಯುವ ವೇಳೆ ಬೃಹತ್ ಹೆಣ್ಣು ಹೆಬ್ಬಾವೊಂದನ್ನು ನೋಡುತ್ತಾನೆ. ’ಕಾ’ ಹೆಸರಿನ ಈ ಹೆಬ್ಬಾವು ಮೋಗ್ಲಿಯನ್ನು ಕೊಲ್ಲಲು ಮುಂದಾದ ವೇಳೆ ಗೆಳೆಯ ಬಾಲೂ ಮೋಗ್ಲಿಯನ್ನು ರಕ್ಷಿಸುತ್ತಾನೆ.
ಸುರಕ್ಷತಾ ಉಪಕರಣವಿಲ್ಲದೆ ಬರಿಗೈಯ್ಯಲ್ಲಿ ʼಜೇನುತುಪ್ಪʼ ಸಂಗ್ರಹ
ಈ ಹೆಬ್ಬಾವು ರಸ್ತೆ ದಾಟುತ್ತಿದ್ದ ವೇಳೆ ಮೋಟರ್‌ಸೈಕಲ್ ಸವಾರರೊಬ್ಬರು ಕಂಡಿದ್ದಾರೆ. ಕೂಡಲೇ ಪ್ರಾಣಿದಯಾ ಸಂಘಟನೆ ಆರ್‌ಎಸ್‌ಪಿಸಿಎ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ ಹೆಬ್ಬಾವನ್ನು ರಕ್ಷಿಸಲಾಗಿದೆ. ಹೆಬ್ಬಾವಿಗೆ ಸೂಕ್ತ ವೈದ್ಯಕೀಯ ಆರೈಕೆ ಕೊಡಲಾಗಿದೆ. ಈ ಹೆಬ್ಬಾವು ತನ್ನ ಮಾಲೀಕರಿಂದ ಇತ್ತೀಚೆಗೆ ತಪ್ಪಿಸಿಕೊಂಡು ಬಂದಿರಬಹುದೆಂದು ಅಂದಾಜಿಸಲಾಗಿದೆ.