
ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಮೊದಲನೇ ಭಾಗ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿತ್ತು. ಇದಾದ ಬಳಿಕ 2022 ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 2 ಕೂಡ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುವ ಮೂಲಕ ಹೊಸ ಅಧ್ಯಾಯ ಬರೆಯಿತು. ಕೆಜಿಎಫ್ ಚಾಪ್ಟರ್ 2 ತೆರೆ ಮೇಲೆ ಬಂದು ಇಂದಿಗೆ ಎರಡು ವರ್ಷಗಳಾಗಿದ್ದು, ಈ ಸಂತಸವನ್ನು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.
ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸಂಜಯ್ ದತ್, ರವೀನಾ ಟೆಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ವಸಿಷ್ಟ ಸಿಂಹ, ಮಾಳವಿಕಾ ಅವಿನಾಶ್, ಟಿಎಸ್ ನಾಗಾಭರಣ, ಐಶ್ವರ್ಯ ರಾವ್, ಅರ್ಚನಾ ಜೋಯಿಸ್, ಅನಂತ್ ನಾಗ್, ಗೋವಿಂದೇಗೌಡ, ದಿನೇಶ್ ಮಂಗಳೂರು, ರಾಮಚಂದ್ರ ರಾಜು, ದಿವ್ಯ ಗೌಡ, ತೆರೆ ಹಂಚಿಕೊಂಡಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದು, ರವಿ ಬಸ್ರೂರು ಸಂಗೀತ ಸಂಯೋಜನೆ ನೀಡಿದ್ದಾರೆ.
