ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಮುಲೋ’ ಚಿತ್ರ ಬಿಡುಗಡೆಯಾಗಿ ಇಂದಿಗೆ ಐದು ವರ್ಷ 12-01-2025 7:30PM IST / No Comments / Posted In: Latest News, Featured News, Live News, Entertainment ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ‘ಅಲಾ ವೈಕುಂಠಪುರಮುಲೋ’ 2020 ಜನವರಿ 12ರಂದು ತೆರೆಕಂಡಿತ್ತು. ಕೇವಲ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಹೊಸ ದಾಖಲೆ ಬರೆಯುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವವಲ್ಲಿ ಯಶಸ್ವಿಯಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಐದು ವರ್ಷಗಳಾಗಿದ್ದು, ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದು, ಜಯರಾಮ್, ಮುರಳಿ ಶರ್ಮಾ, ಸುಶಾಂತ್, ಸುನಿಲ್, ನವದೀಪ್, ಹರ್ಷವರ್ಧನ್, ನಿವೇತಾ ಪೇತುರಾಜ್, ರಾಜೇಂದ್ರ ಪ್ರಸಾದ್, ಸಮುದ್ರಕನಿ, ವೆನ್ನೆಲ ಕಿಶೋರ್, ಅಜಯ್, ಬ್ರಹ್ಮಾಜಿ, ಉಳಿದ ಪಾತ್ರವರ್ಗದಲ್ಲಿದ್ದಾರೆ. ಗೀತಾ ಆರ್ಟ್ಸ್, ಹರಿಕಾ & ಹಾಸನ್ ಕ್ರಿಯೇಷನ್ಸ್, ಬ್ಯಾನರ್ ನಲ್ಲಿ ಅಲ್ಲು ಅರವಿಂದ್ ಹಾಗೂ ಎಸ್ ರಾಧಾಕೃಷ್ಣ ನಿರ್ಮಾಣ ಮಾಡಿದ್ದಾರೆ. ನವೀನ್ ನೂಲಿ ಸಂಕಲನ, ಪಿ ಎಸ್ ವಿನೋದ್ ಛಾಯಾಗ್ರಹಣವಿದೆ. ಇನ್ನುಳಿದಂತೆ ಥಮನ್ ಎಸ್. ಸಂಗೀತ ಸಂಯೋಜನೆ ನೀಡಿದ್ದಾರೆ. View this post on Instagram A post shared by Haarika & Hassine Creations (@haarikahassine)