alex Certify ಎರಡು ಫುಟ್​ಬಾಲ್​ ತಂಡಗಳಿಗೆ ನವಜೋಡಿಯ ಜಟಾಪಟಿ: ಉಡುಗೊರೆ ಕೊಟ್ಟು ರಾಜಿ ಮಾಡಿಕೊಂಡ ವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಫುಟ್​ಬಾಲ್​ ತಂಡಗಳಿಗೆ ನವಜೋಡಿಯ ಜಟಾಪಟಿ: ಉಡುಗೊರೆ ಕೊಟ್ಟು ರಾಜಿ ಮಾಡಿಕೊಂಡ ವರ

ಈಗಷ್ಟೇ ಮದುವೆಯಾಗಿರುವ ಅಮಿತಾ ಮತ್ತು ಸೋಮನಾಥ್ ಎಂಬ ಜೋಡಿ ಭಾರಿ ಸುದ್ದಿಯಲ್ಲಿದೆ. ಇದಕ್ಕೆ ಕಾರಣ, ಈ ಐಟಿ ಉದ್ಯೋಗಿಗಳಲ್ಲಿ ವರ ಫಿಫಾ ವಿಶ್ವಕಪ್​ ಫುಟ್​ಬಾಲ್​ನಲ್ಲಿ ಅರ್ಜೆಂಟೀನಾವನ್ನು ಬೆಂಬಲಿಸಿದರೆ, ವಧು ಬ್ರೆಜಿಲ್​ ಅನ್ನು ಬೆಂಬಲಿಸುತ್ತಾಳೆ.

ಹಲವಾರು ಒಂದೇ ರೀತಿಯ ಮನಸ್ಥಿತಿಯುಳ್ಳ ಈ ಜೋಡಿ ಈಗ ಫುಟ್​ಬಾಲ್​ನಿಂದ ಭಿನ್ನಭಿನ್ನವಾಗಿ ಯೋಚಿಸುವಂತಾಗಿದೆಯಂತೆ. ಮೊನ್ನೆಮೊನ್ನೆಯಷ್ಟೇ ಮದುವೆಯಾಗಿರುವ ಈ ಜೋಡಿ, ಮದುವೆಯಾದ ಮರುದಿನ ವರನ ಮನೆಗೆ ಹೋಗಿದೆ.

ಅಂದರೆ ಕಳೆದ ಗುರುವಾರ ಈ ಘಟನೆ ನಡೆದಿದೆ. ಮಾರನೆಯ ದಿನ ಅಂದರೆ ಶುಕ್ರವಾರ ಬ್ರೆಜಿಲ್ ಮತ್ತು ಕ್ರೊಯೇಷಿಯಾ ನಡುವೆ ಕ್ವಾರ್ಟರ್ ಫೈನಲ್ ಪಂದ್ಯ ನಡೆದಿತ್ತು. ಅದೇ ದಿನ ಆಟಗಾರ ನೇಮರ್ ವಿಶ್ವಕಪ್‌ನಿಂದ ವಿದಾಯ ಹೇಳಿದರು. ಇದರಿಂದ ವಧು ಭಾರಿ ದುಃಖಿತಳಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಇದನ್ನು ಶೇರ್​ ಮಾಡಿಕೊಂಡಿದ್ದಾಳೆ.

ನನಗೆ ಎರಡು ಆಘಾತ. ಒಂದನೆಯದ್ದು ತವರು ಮನೆಯನ್ನು ಬಿಟ್ಟುಬರುವುದು ಹಾಗೂ ನೇಮರ್​ ಆಟವನ್ನು ತೊರೆದಿರುವುದು ಎಂದಿದ್ದಾಳೆ. ಮದುವೆಯ ಮನೆಯಲ್ಲಿ ನೆಂಟರಿಷ್ಟರು ಇರುವಾಗಲೇ ವಿಭಿನ್ನ ಟೀಮ್​ಗಳನ್ನು ಬೆಂಬಲಿಸುತ್ತಾ ವಧು-ವರರು ಕೂಗಾಡುತ್ತಿರುವುದನ್ನು ನೋಡಿ ಬಂದ ಜನರು ನಕ್ಕಿದ್ದೇ ನಕ್ಕಿದ್ದಂತೆ.

ತಾವು ನೂತನ ದಂಪತಿ ಎನ್ನುವುದನ್ನೂ ಮರೆತು ತಮ್ಮ ನೆಚ್ಚಿನ ತಂಡದ ಪರವಾಗಿ ಬ್ಯಾಟಿಂಗ್​ ಮಾಡುತ್ತಿದ್ದ ಈ ಜೋಡಿ ಈಗ ಭಾರಿ ವೈರಲ್​. ಮದುವೆಯಾದ ರಾತ್ರಿಯಿಂದಲೇ ಈ ಎರಡು ತಂಡಗಳಿಗಾಗಿ ಜೋಡಿ ಜಗಳವಾಡಿದ್ದೂ ಇದೆಯಂತೆ!

ಕೊನೆಗೆ ಇಬ್ಬರ ನಡುವೆಯೂ ರಾಜಿ ಆಗಿದೆ. ಅದು ಹೇಗೆ ಎಂದರೆ ವರ ನೀಡಿದ ಉಡುಗೊರೆಯಿಂದ. ನಮ್ಮ ನಮ್ಮ ತಂಡ ಬ್ರೆಜಿಲ್ ಆಗಿರಲಿ ಅಥವಾ ಅರ್ಜೆಂಟೀನಾ ಆಗಿರಲಿ. ನಮ್ಮಿಬ್ಬರ ಶಾಶ್ವತ ಪ್ರೀತಿ ಫುಟ್ಬಾಲ್ ಆಗಿದೆ ಎಂದು ವಧುವನ್ನು ರಮಿಸುತ್ತಾ ವರ ಭರ್ಜರಿ ಉಡುಗೊರೆ ನೀಡಿದಾಗ ವಧು ನಕ್ಕಿದ್ದು, ಇಬ್ಬರ ನಡುವೆ ರಾಜಿ ಸಂಧಾನವಾಗಿದೆ ಎಂದು ಪೋಸ್ಟ್​ನಲ್ಲಿ ಬರೆಯಲಾಗಿದೆ. ಇವರ ಈ ಕಥೆ ಕೇಳಿ ನೆಟ್ಟಿಗರು ಥರಹೇವಾರಿ ಕಮೆಂಟ್​ ಮಾಡುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...