ಹಿರಿಯ ನಾಗರಿಕರಿಗೆ ನೆಮ್ಮದಿ ಸುದ್ದಿ ನೀಡಿದ ಆದಾಯ ತೆರಿಗೆ ಇಲಾಖೆ 10-01-2022 9:09PM IST / No Comments / Posted In: Business, Latest News, Live News ದೇಶದ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಇಲಾಖೆ ಸಂತಸದ ಸುದ್ದಿ ನೀಡಿದೆ. 1961 ರ ಆದಾಯ ತೆರಿಗೆ ಕಾಯಿದೆಗೆ, ಸರ್ಕಾರವು 194P ಎಂಬ ಹೊಸ ಸೆಕ್ಷನ್ ಸೇರಿಸಿದೆ. ಇದರಿಂದ ಪಿಂಚಣಿ ಹಾಗೂ ಬಡ್ಡಿಯ ಆದಾಯ ಹೊಂದಿರುವ 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಐಟಿಆರ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್ ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು, ಇನ್ಮೇಲೆ ಇದು ಕಾರ್ಯಚರಣೆಗೆ ಬರಲಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ. ಹಣಕಾಸು ಕಾಯಿದೆ, 2021 ರ ಮೂಲಕ ಆದಾಯ ತೆರಿಗೆ ಕಾಯಿದೆಯಲ್ಲಿ ಈ ಬದಲಾವಣೆ ತರಲಾಗಿದೆ. ಪಿಂಚಣಿ ಪಡೆಯುವ ಬ್ಯಾಂಕ್‌ನಲ್ಲಿ ನಿರ್ವಹಿಸುವ ಖಾತೆಗಳಿಂದ ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ಮಾತ್ರ ಹೊಂದಿರುವ ದೇಶದ ಅತ್ಯಂತ ಹಿರಿಯ ನಾಗರಿಕರಿಗೆ, ಇನ್ಮುಂದೆ ಆದಾಯ ತೆರಿಗೆ ರಿಟರ್ನ್ಸ್ ಕಟ್ಟುವ ಯೋಚನೆ ಇರುವುದಿಲ್ಲ. ಕೇವಲ ಪಿಂಚಣಿ ಮತ್ತು ಬಡ್ಡಿ ಆದಾಯ ಹೊಂದಿರುವ ಹಿರಿಯ ನಾಗರಿಕರಿಗೆ, ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ನೀಡಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ನಲ್ಲಿ ಹೇಳಿದ್ದರು. 2022ರ ಶುರುವಿನಲ್ಲೆ ಈ ಮಾತನ್ನ ಸಾಕಾರಗೊಳಿಸಿದ್ದಾರೆ. A new section 194P inserted in Income-tax Act,1961 provides that senior citizens above the age of 75 years, having only pension & interest income from accounts maintained with bank in which they receive pension will be exempted from filing ITR.#Budget2021Recap pic.twitter.com/3OHVfLlFza — Ministry of Finance (@FinMinIndia) January 10, 2022