ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಈ ಸೆಪ್ಟೆಂಬರ್ 30 ರೊಳಗೆ ಮಾಡಿ ಮುಗಿಸಬೇಕಾದ ಅತ್ಯಗತ್ಯ ಐದು ಕೆಲಸಗಳ ಪಟ್ಟಿ ಇಲ್ಲಿದೆ ನೋಡಿ.
* ಪಿಎಫ್ ಖಾತೆಗೆ ಆಧಾರ್ ಜೋಡಣೆ
ನೌಕರರು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‍ಓ) ಖಾತೆಯ ಯುಎಎನ್ ಸಂಖ್ಯೆಗೆ ತಮ್ಮ ಆಧಾರ್ ಕಾರ್ಡ್‍ನ್ನು ಜೋಡಣೆ ಮಾಡಬೇಕು. ಮಾಸಿಕ ಸಂಬಳ ಪಡೆಯುವ ಪ್ರತಿಯೊಬ್ಬರು ಸೆಪ್ಟೆಂಬರ್ 30ರೊಳಗಾಗಿ ಆಧಾರ್ ಲಿಂಕ್ ಪೂರ್ಣಗೊಳಿಸಬೇಕಿದೆ.
* ಐಟಿ ರಿಟರ್ನ್ಸ್ (ಐಟಿಆರ್)
2020-21 ನೇ ಹಣಕಾಸು ಸಾಲಿನ ಐಟಿ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಸೆ.30 ರ ಗಡುವು ನೀಡಿದೆ ಐಟಿ ಇಲಾಖೆ. ಕೊರೊನಾ ದಾಳಿ, ಲಾಕ್‍ಡೌನ್ ಜಂಜಾಟದಿಂದಾಗಿ ಐಟಿಆರ್ ಸಲ್ಲಿಕೆ ಗಡುವನ್ನು ಈ ಹಿಂದೆ ಜುಲೈ 31ಕ್ಕೆ ವಿಸ್ತರಿಸಲಾಗಿತ್ತು. ಅದಾಗ್ಯೂ ಸೆ.30ರವರೆಗೆ ಕಡೆಯ ಬಾರಿ ಗಡುವು ನೀಡಲಾಗಿದೆ.
* ಪ್ಯಾನ್ ಕಾರ್ಡ್‍ಗೆ ಆಧಾರ್ ಲಿಂಕ್
ನಿಮ್ಮ ಆಧಾರ್ ಅನ್ನು ನಿಮ್ಮ ಪ್ಯಾನ್ ಕಾರ್ಡ್‍ಗೆ ಲಿಂಕ್ ಮಾಡಲು ಕೂಡ ಇದೇ ಸೆ. 30 ಕೊನೆಯ ದಿನವಾಗಿದೆ. ತಪ್ಪಿದರೆ ನಿಮ್ಮ ಪ್ಯಾನ್ ಕಾರ್ಡ್ ಮೂಲಕ ನಡೆಯುವ ಎಲ್ಲ ಹಣಕಾಸು ವ್ಯವಹಾರಗಳು ತಡೆಹಿಡಿಯಲ್ಪಡುತ್ತವೆ. ಅಲ್ಲದೇ ದೊಡ್ಡ ಮೊತ್ತದ ದಂಡ ಕೂಡ ಪಾವತಿಸಬೇಕಿದೆ.
ಅವಳಿ ಆನೆಮರಿಗಳ ಅಪರೂಪದ ಜನನಕ್ಕೆ ಸಾಕ್ಷಿಯಾಯ್ತು ಶ್ರೀಲಂಕಾ
* ಡಿಮ್ಯಾಟ್ ಅಕೌಂಟ್‍ಗೆ ಕೆವೈಸಿ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ‘ಸೆಬಿ’ ನಿರ್ದೇಶನ ನೀಡಿರುವಂತೆ ಸೆಪ್ಟೆಂಬರ್ ಅಂತ್ಯದೊಳಗೆ ಯಾರು ಡಿಮ್ಯಾಟ್ ಅಕೌಂಟ್ ಹೊಂದಿರುತ್ತಾರೋ ಅವರೆಲ್ಲರೂ ಕೆವೈಸಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.
* ಡೆಬಿಟ್ ಕಾರ್ಡ್‍ಗೆ ಮೊಬೈಲ್ ಸಂಖ್ಯೆ ಜೋಡಣೆ
ಅಕ್ಟೋಬರ್ 1 ರಿಂದ ಇ-ಪಾವತಿ ಸೇವೆಗಳ ಮೂಲಕ ಡೆಬಿಟ್/ಕ್ರೆಡಿಟ್ ಕಾರ್ಡ್ ಪಾವತಿಗಳಿಗೆ, ಬ್ಯಾಂಕ್‍ಗಳು ನಿಮ್ಮ ಮೊಬೈಲ್ ಸಂಖ್ಯೆಗೆ ಪಾವತಿ ದಿನಾಂಕಕ್ಕಿಂತ 24 ಗಂಟೆಗಳ ಮೊದಲು ಸಂದೇಶವನ್ನು ಕಳುಹಿಸಬೇಕಾಗುತ್ತದೆ. ಇದಕ್ಕಾಗಿ ಮೊಬೈಲ್ ಸಂಖ್ಯೆ ದೃಢಿಕರಣಗೊಂಡಿರಬೇಕು. ಇಲ್ಲದಿದ್ದರೆ ವ್ಯವಹಾರ ಸ್ಥಗಿತವಾಗುತ್ತದೆ.