ನಿಮ್ಮ ತೆರಿಗೆ ರಿಟರ್ನ್ಸ್‌ಅನ್ನು ಶೀಘ್ರವಾಗಿ ಸಂಸ್ಕರಿಸಲಿರುವ ಕಾರಣ ರೀಫಂಡ್‌ಗಳು ತ್ವರಿತವಾಗಿ ಲಭ್ಯವಾಗಲಿವೆ.
2. ಸರಳ ಹಾಗೂ ಒಂದೇ ಡ್ಯಾಶ್‌ಬೋರ್ಡ್
ತೆರಿಗೆ ಪಾವತಿ ಪ್ರಕ್ರಿಯೆಗಳನ್ನು ಸರಳಗೊಳಿಸಲು ಒಂದೇ ಡ್ಯಾಶ್‌ಬೋರ್ಡ್ ಫೀಚರ್ ಪರಿಚಯಿಸಲಿರುವ ಐಟಿ ಇಲಾಖೆ, ಬಹು ವ್ಯವಹಾರಗಳು ಹಾಗೂ ಅಪ್ಲೋಡ್‌ಗಳಿಗೆ ಏಕ ಸಂಪರ್ಕ ಬಿಂದು ಒದಗಿಸಲಿದ್ದು, ತೆರಿಗೆ ಪಾವತಿದಾರರು ತಮ್ಮ ವಿನಂತಿಗಳನ್ನು ಪೋರ್ಟಲ್‌ನಲ್ಲಿ ಆರಾಮವಾಗಿ ಫಾಲೋ ಅಪ್ ಮಾಡಬಹುದಾಗಿದೆ.
3. ತೆರಿಗೆ ರಿಟರ್ನ್ಸ್ ಫೈಲಿಂಗ್‌ಗೆ ಮೊಬೈಲ್ ಅಪ್ಲಿಕೇಶನ್ ?
ತೆರಿಗೆ ಪಾವತಿಯ ಹೊಸ ವ್ಯವಸ್ಥೆಯನ್ನು ಜೂನ್ 18ರಂದು ಲಾಂಚ್ ಮಾಡಲು ನೇರ ತೆರಿಗೆ ಮಂಡಳಿ ಯೋಜಿಸುತ್ತಿದೆ. ಇದೇ ವೇಳೆ ಮೊಬೈಲ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಲು ಪೋರ್ಟಲ್‌ನೊಂದಿಗೆ ಲಾಂಚ್ ಮಾಡಲು ಮಂಡಳಿ ಚಿಂತನೆ ನಡೆಸಿದೆ.
4. ಆದಾಯ ತೆರಿಗೆ ಸಿದ್ಧತೆ ಸಾಫ್ಟ್‌ವೇರ್
ಮುಂಬರಲಿರುವ ಪೋರ್ಟಲ್‌ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಿದ್ಧತೆ ಸಾಫ್ಟ್‌ವೇರ್ ಇರಲಿದ್ದು, ಇದನ್ನು ತೆರಿಗೆದಾರರಿಗೆ ನಿಶ್ಶುಲ್ಕವಾಗಿ ಒದಗಿಸಲಾಗುವುದು. “ಐಟಿಆರ್ 1, 4 (ಆನ್ಲೈನ್ ಮತ್ತು ಆಫ್ಲೈನ್) ಮತ್ತು ಐಟಿಆರ್ 2 (ಆಫ್ಲೈನ್) ವಿಚಾರದಲ್ಲಿ ತೆರಿಗೆ ಪಾವತಿದಾರರಿಗೆ ನೆರವಾಗಲು ಉಚಿತವಾಗಿ ಐಟಿಆರ್ ಸಿದ್ಧತೆಯ ಸಾಫ್ಟ್‌ವೇರ್ ಒದಗಿಸಲಾಗುವುದು. ಐಟಿಆರ್ 3, 5, 6, 7ಕ್ಕೆ ಸಿದ್ಧತೆ ಮಾಡಿಕೊಳ್ಳಲು ವ್ಯವಸ್ಥೆಗಳನ್ನು ಶೀಘ್ರವೇ ಒದಗಿಸಲಾಗುವುದು” ಎಂದು ಸಿಬಿಡಿಟಿ ತಿಳಿಸಿದೆ.
5. ಗ್ರಾಹಕ ಸೇವಾ ಸೌಲಭ್ಯ
ಐಟಿಆರ್ ಸಲ್ಲಿಕೆ ವೇಳೆ ಪ್ರಶ್ನೆಗಳೇನಾದರೂ ಇದ್ದಲ್ಲಿ ತೆರಿಗೆ ಪಾವತಿದಾರರು ಕಾಲ್ ಸೆಂಟರ್‌ಗೆ ಕರೆ ಮಾಡಬಹುದಾಗಿದೆ. ವಿವರವಾದ ಪ್ರಶ್ನೋತ್ತರಗಳು, ಬಳಕೆದಾರರ ಮ್ಯಾನುವಲ್‌ಗಳು, ವಿಡಿಯೋಗಳು ಹಾಗೂ ಚಾಟ್‌ಬೋಟ್ ಅಥವಾ ಲೈವ್ ಏಜೆಂಟ್‌ಗಳ ವ್ಯವಸ್ಥೆಯನ್ನು ಒದಗಿಸುವುದಾಗಿ ವಿತ್ತ ಸಚಿವಾಲಯ ತಿಳಿಸಿದೆ.