ತೆರಿಗೆ ರಿಟರ್ನ್ಸ್ ಇದೀಗ ಇನ್ನಷ್ಟು ಸರಳವಾಗಿದ್ದು, ನಿಮ್ಮ ಹತ್ತಿರದ ಅಂಚೆ ಕಚೇರಿಗಳ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿಎಸ್‌ಸಿ) ನಿಮ್ಮ ತೆರಿಗೆ ರಿಟರ್ನ್ಸ್ ಸಲ್ಲಿಸಲೂಬಹುದಾಗಿದೆ. ಇದರಿಂದ ದೇಶಾದ್ಯಂತ ಇರುವ ಲಕ್ಷಾಂತರ ತೆರಿಗೆದಾರರಿಗೆ ಅನುಕೂಲವಾಗಲಿದೆ.
ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನೀವೀಗ ದೂರ ಎಲ್ಲೂ ಹೋಗಬೇಕಾಗಿಲ್ಲ. ನಿಮ್ಮ ಹತ್ತಿರದಲ್ಲೇ ಇರುವ ಅಂಚೆ ಕಚೇರಿ ಸಾಮಾನ್ಯ ಸೇವಾ ಕೇಂದ್ರದ ಕೌಂಟರ್‌ನಲ್ಲೇ ಪಾವತಿಸಬಹುದಾಗಿದೆ ಎಂದು ಭಾರತೀಯ ಅಂಚೆ ಟ್ವಿಟರ್‌ನಲ್ಲಿರುವ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದೆ.
ಅಂಚೆ ಕಚೇರಿಗಳಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳು ಸಾರ್ವಜನಿಕರಿಗೆ ಅಂಚೆ, ಬ್ಯಾಂಕಿಂಗ್, ವಿಮೆ ಸೇರಿದಂತೆ ಅನೇಕ ವಿತ್ತೀಯ ಸೇವೆಗಳನ್ನು ಕೊಡಮಾಡುವ ಅಕ್ಸೆಸ್ ಪಾಯಿಂಟ್‌ಗಳಾಗಿ ಕೆಲಸ ಮಾಡುತ್ತಿವೆ.