2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್ಲೈನ್ ಅನ್ನು ಕೋವಿಡ್-19 ಸಾಂಕ್ರಮಿಕದ ಎರಡನೇ ಕಾರಣದಿಂದ ವಿಸ್ತರಿಸಲಾಗಿದೆ.
ಕಳೆದ ವಿತ್ತಿಯ ವರ್ಷದ ಐಟಿಆರ್-1 ಹಾಗೂ ಐಟಿಆರ್-4 ಸಲ್ಲಿಕೆಯ ಡೆಡ್ಲೈನ್ ಅನ್ನು ಜುಲೈ 31ರ ಬದಲಿಗೆ ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ.
BIG NEWS: ಡಿಜಿಟಲ್ ಪಾವತಿಯಲ್ಲಿ ಆಗಲಿದೆ ಮಹತ್ವದ ಬದಲಾವಣೆ
ಒಂದು ವೇಳೆ ನಿಮ್ಮದು ಕೃಷಿ ಆಧರಿತ ಅದಾಯವಾಗಿದ್ದರೆ, ಆಗಲೂ ಐಟಿಆರ್ ಫೈಲಿಂಗ್ ಮಾಡಬಹುದಾಗಿದ್ದು, ಆದಾಯ ತೆರಿಗೆಯ ಸೆಕ್ಷನ್ 10(1)ರ ಅನ್ವಯ ಕೃಷಿಯಿಂದ ಬರುವ ಆದಾಯವು ತೆರಿಗೆ ರಹಿತವಾಗಿದೆ.
ಸೆಕ್ಷನ್ 2(1ಎ)ನಲ್ಲಿ ಕೃಷಿ ಆದಾಯವನ್ನು ವಿವರಿಸಲಾಗಿದೆ. ಕೃಷಿ ಆದಾಯದ ವಿವರಣೆಯಲ್ಲಿ ಈ ಮೂರು ಅಂಶಗಳು ಸೇರಿವೆ:
ಏಪ್ರಿಲ್ – ಜೂನ್‌ನಲ್ಲಿ ಜಿಡಿಪಿಯಲ್ಲಿ ಶೇ.18.5 ರಷ್ಟು ವೃದ್ಧಿ
1. ಭಾರತದಲ್ಲಿರುವ ಕೃಷಿ ಉದ್ದೇಶಗಳಿಗೆಂದು ಬಳಸುವ ಜಮೀನಿನ ಮೇಲೆ ಬರುವ ಯಾವುದೇ ಬಾಡಿಗೆ.
2. ಕೃಷಿ ಉತ್ಪನ್ನಗಳ ಸಂಸ್ಕರಣೆಯಂಥ ಕೃಷಿ ಕಾರ್ಯಾಚರಣೆಗಳ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಿಂದ ಆದಾಯ ಸಂಪಾದಿಸುತ್ತಿರುವ ಕೃಷಿ ಭೂಮಿ.
3. ಸೆಕ್ಷನ್ 2(1ಎ)ಯಲ್ಲಿರುವ ಕೆಲ ಷರತ್ತುಗಳಿಗೆ ಅನುಗುಣವಾಗಿ ಫಾರಂ ಹೌಸ್‌ನಿಂದ ಬರುವ ಆದಾಯ.