ಆದಾಯ ತೆರಿಗೆ ವರದಿ (ರಿಟರ್ನ್) ಸಲ್ಲಿಸಲು ವಿವಿಧ ಆನ್ ಲೈನ್ ಆಯ್ಕೆಗಳಿವೆ. ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್ ಸೈಟ್ ಕೂಡ ಇದೆ. ಅಲ್ಲದೇ ಎಸ್.ಬಿ.ಐ.ನ ಯೋನೋ ಅಪ್ಲಿಕೇಶನ್ ಕೂಡ ಬಳಸಿಕೊಂಡು ಸಲೀಸಾಗಿ ಐಟಿ ರಿಟರ್ನ್ ಸಲ್ಲಿಸಬಹುದಾಗಿದೆ, ಅದು ಬಹಳ ಉಪಯುಕ್ತವಾಗಿದೆ ಎಂಬ ಮಾಹಿತಿ ಇದೆ.
ಐಟಿ ರಿಟರ್ನ್ ಸಲ್ಲಿಸಲು ಎರಡು ತಿಂಗಳು ಬಾಕಿ ಇದೆ. ಕಾಲಾವಕಾಶವಿದೆ ಎಂದು ಕೊನೆ ಕ್ಷಣದವರೆಗೆ ಕಾಯುವುದಕ್ಕಿಂತ ಈಗಲೇ ಸಲ್ಲಿಕೆ ಮಾಡುವುದು ಸೂಕ್ತವಾಗಬಹುದು.
ನವರಾತ್ರಿ ಸ್ಪೆಷಲ್ ʼಕೊಬ್ಬರಿ ಹಲ್ವಾʼ
ಎಸ್.ಬಿ.ಐ. ತನ್ನ ಯೋನೋ ಆಪ್ ಬಳಸಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ನಿಮ್ಮ ಐ.ಟಿ.ಆರ್. ಅನ್ನು ಮುಂಚಿತವಾಗಿ ಯೋನೋ ಟ್ಯಾಕ್ಸ್ 2 ವಿನ್ ನೊಂದಿಗೆ ಸಲ್ಲಿಸುವ ಮೂಲಕ ನೀವು ಅತ್ಯಾಕರ್ಷಕ ಪ್ರಯೋಜನ ಪಡೆಯುತ್ತೀರಿ ಎಂದು ಎಸ್ ಬಿಐ ಹೇಳಿಕೊಂಡಿದೆ. ಉಚಿತ ಫೈಲಿಂಗ್ ಜೊತೆಗೆ ಮುಂಚಿತವಾಗಿ ಮರುಪಾವತಿ ಪಡೆಯುತ್ತೀರಿ, ಸಾಕಷ್ಟು ಸಮಯಾವಕಾಶವೂ ಸಿಗಲಿದೆ ಎಂದು ಎಸ್.ಬಿ.ಐ. ಟ್ವೀಟ್ ಮಾಡಿದೆ.
ಗಮನಿಸಿ: ಈ ತಿಂಗಳಾಂತ್ಯಕ್ಕೆ ಸಿಗಲಿದೆ ಎಸ್‌ಎಸ್‌ಸಿ GD ಪೇದೆ ಪರೀಕ್ಷೆ ಅಡ್ಮಿಟ್ ಕಾರ್ಡ್
ಹಾಗಿದ್ದರೆ ಐಟಿ ರಿಟರ್ನ್ ಸಲ್ಲಿಕೆ ಮುನ್ನ ಏನಿಲ್ಲ ತಯಾರಿ ಬೇಕು ?
1. ಪ್ಯಾನ್ ಕಾರ್ಡ್
2. ಆಧಾರ್ ಕಾರ್ಡ್ ಸಂಖ್ಯೆ
3. ವೇತನ/ಪಿಂಚಣಿ: ಉದ್ಯೋಗದಾತರಿಂದ ಪಡೆದ ನಮೂನೆ 16
4. ಉಳಿತಾಯ ಖಾತೆ ಮತ್ತು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ಮಾಹಿತಿಗೆ ಬ್ಯಾಂಕ್ ಸ್ಟೇಟ್ ಮೆಂಟ್/ ಪಾಸ್ ಬುಕ್
5. ನಮೂನೆ 26 ಎಎಸ್ನಲ್ಲಿ ಲಭ್ಯ ಇರುವ ತೆರಿಗೆ ಪಾವತಿ ವಿವರ
2020-21ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನು ಕೇಂದ್ರ ನೇರ ತೆರಿಗೆ ಮಂಡಳಿ ವಿಸ್ತರಿಸಿದೆ. ಸೆಪ್ಟೆಂಬರ್ 30ರ ವರೆಗೆ ಇದ್ದ ಅವಕಾಶವನ್ನು ಡಿಸೆಂಬರ್ 30ರವರೆಗೂ ವಿಸ್ತರಿಸಲಾಗಿದೆ.