2020-21ನೇ ಆರ್ಥಿಕ ವರ್ಷದ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ ಮತ್ತೊಮ್ಮೆ ವಿಸ್ತರಿಸುವುದು ಗೊತ್ತಿರುವ ವಿಚಾರ. ಸೆಪ್ಟೆಂಬರ್ 30ರವರೆಗೆ ಇದ್ದ ಕಾಲಾವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.
BIG NEWS: ವಿಮಾನ ಪ್ರಯಾಣದಲ್ಲಿ ಶೇ.100 ಸಾಮರ್ಥ್ಯಕ್ಕೆ ಅವಕಾಶ
ಅನೇಕ ಸಂದರ್ಭಗಳಲ್ಲಿ ಆದಾಯ ತೆರಿಗೆಯನ್ನು ತಪ್ಪಾಗಿ ಲೆಕ್ಕಹಾಕುವ ಸಾಧ್ಯತೆ ಇರುತ್ತದೆ. ಹಾಗೆಯೇ, ಆರಂಭದಲ್ಲೇ ಟಿಡಿಎಸ್ ಕಡಿತವಾದ ಸಂದರ್ಭಗಳಿರುತ್ತದೆ. ಅಂತಹ ಸಂದರ್ಭದಲ್ಲಿ ತೆರಿಗೆ ಸಲ್ಲಿಸುವವರು ಐಟಿಆರ್ ಸಲ್ಲಿಸುವ ಸಮಯದಲ್ಲಿ ತೆರಿಗೆ ಮರುಪಾವತಿಗಾಗಿ ಕ್ಲೇಮ್ ಮಾಡಬಹುದು, ಪರಿಶೀಲನೆ ನಂತರ ಐಟಿ ಇಲಾಖೆಯು ತೆರಿಗೆ ಮರುಪಾವತಿ ಪ್ರಕ್ರಿಯೆಗೊಳಿಸಲಿದೆ.
ತೆರಿಗೆ ಮರುಪಾವತಿ ಪಡೆಯಲು ಆದಾಯ ತೆರಿಗೆ ಸಲ್ಲಿಸುವವರು ತಮ್ಮ ಬ್ಯಾಂಕ್ ಖಾತೆಗಳನ್ನು ಪೂರ್ವ ಮೌಲ್ಯೀಕರಿಸಲು ಅವಕಾಶ ಇರಲಿದೆ. ಇದನ್ನು ಹೇಗೆ ಮಾಡಬೇಕೆಂಬ ಬಗ್ಗೆ ಬಹುತೇಕರಿಗೆ ತಿಳಿದಿರುವುದಿಲ್ಲ. ಅದನ್ನು ತಿಳಿಸಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಸಿಹಿ ಸಿಹಿ ರವೆ ಹಾಲುಬಾಯಿ ಮಾಡುವ ವಿಧಾನ
– ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ಗೆ ಹೋಗಿ, ಪ್ರೀ ವ್ಯಾಲಿಡಿಟಿ ಸೆಕ್ಷನ್ ನಲ್ಲಿ ಲಾಗಿನ್ ಆಗಬೇಕು.
– ಗುರುತಿನ ಸಂಖ್ಯೆ(ಐಡಿ) ಮತು ಪಾಸ್ ವರ್ಡ್, ಕ್ಯಾಪ್ಚಾ ಕೋಡ್ ಎಂಟ್ರಿ ಮಾಡಬೇಕು.
– ಪ್ರೀ ವ್ಯಾಲಿಡೇಟ್ ಬ್ಯಾಂಕ್ ಖಾತೆಯನ್ನು ನಮೂದಿಸಬೇಕು. ಬಳಿಕ ಆಡ್ ಬಟನ್ ಕ್ಲಿಕ್ ಮಾಡಬೇಕು.
– ಬ್ಯಾಂಕ್ ಖಾತೆ ವಿವರ, ಸಂಪರ್ಕ ವಿಳಾಸ ನಮೂದಿಸಬೇಕು.
– ಬಳಕೆದಾರರು ಬ್ಯಾಂಕ್ ಖಾತೆ, ಐಎಫ್ಎಸ್ಸಿ ಕೋಡ್, ಬ್ಯಾಂಕ್ ಹೆಸರು ಸರಿಯಾಗಿ ತಿಳಿದುಕೊಂಡಿರಬೇಕು.
– ಅಷ್ಟೇ ಅಲ್ಲದೆ ಪಾನ್ ನಂಬರ್, ಇಮೇಲ್ ವಿಳಾಸ, ಮೊಬೈಲ್ ನಂಬರ್ ಬ್ಯಾಂಕ್ ಖಾತೆಗೆ ನೀಡಿದ ಮಾಹಿತಿಯೊಂದಿಗೆ ಹೊಂದಾಣಿಕೆ ಆಗಬೇಕು.