ಉತ್ತರಾಖಂಡದ ಮಿಲಾಮ್ ಬಳಿ ಸಿಲುಕಿದ್ದ ಸ್ಥಳೀಯರನ್ನು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ 12,000 ಅಡಿ ಎತ್ತರದಿಂದ ರಕ್ಷಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಜನರನ್ನು ರಕ್ಷಿಸುತ್ತಿರುವ ಈ ಕಾರ್ಯಾಚರಣೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯರಾದ ನಾಲ್ವರು ಪರ್ವತ ನದಿಗೆ ಅಡ್ಡಲಾಗಿ ಗಂಟೆಗಳ ಕಾಲ ಅಲ್ಲಿ ಸಿಲುಕಿಕೊಂಡಿದ್ದರು ಎನ್ನಲಾಗಿದೆ. 1.54 ನಿಮಿಷವಿರುವ ಈ ವಿಡಿಯೋದಲ್ಲಿ ವ್ಯಕ್ತಿಗಳು ನದಿಗೆ ಅಡ್ಡಲಾಗಿ ಬಂಡೆಯ ಮೇಲೆ ನಿಂತಿರುವುದನ್ನು ನೋಡಬಹುದು. ಅವರಲ್ಲಿ ಒಬ್ಬರು ಜೋಡಿಸಲಾದ ಹಗ್ಗದ ರೇಖೆಗಳನ್ನು ಹಿಡಿದು ಇನ್ನೊಂದು ಬದಿಗೆ ದಾಟುವುದನ್ನು ವಿಡಿಯೋದಲ್ಲಿ ನೋಡಬಹುದು.
EFPO ಚಂದಾದಾರರಿಗೆ ಮಹತ್ವದ ಮಾಹಿತಿ: ನಿರ್ವಹಿಸಬೇಕಿದೆ 2 ಪಿಎಫ್ ಖಾತೆ -2.5 ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆಗೆ ಬಡ್ಡಿ ಬರೆ
“ಕೆಲವು ಗಿಡಮೂಲಿಕೆಗಳನ್ನು ಸಂಗ್ರಹಿಸಲು ಹೋದ ಗ್ರಾಮಸ್ಥರು, ನದಿ ತುಂಬಿ ಹರಿಯುತ್ತಿರುವುದರಿಂದ ಅಲ್ಲೇ ಸಿಕ್ಕಿಹಾಕಿಕೊಂಡಿದ್ದಾರೆ. ಇದನ್ನು ಗಮನಿಸಿದ ಅಲ್ಲೇ ಸಮೀಪದಲ್ಲಿ ಬೀಡು ಬಿಟ್ಟಿದ್ದ ಸೈನಿಕರು ಸ್ಥಳೀಯರ ರಕ್ಷಣಾ ಕಾರ್ಯಾಚರಣೆ ನಡೆಸಿದರು” ಎಂದು ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ ತಿಳಿಸಿದ್ದಾರೆ.