alex Certify ಹಿಮಾಲಯದ 15,000 ಅಡಿ ಎತ್ತರದಲ್ಲಿ‌ ಐಟಿಬಿಪಿ ಸಿಬ್ಬಂದಿಯಿಂದ ಯೋಗ ಪ್ರದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮಾಲಯದ 15,000 ಅಡಿ ಎತ್ತರದಲ್ಲಿ‌ ಐಟಿಬಿಪಿ ಸಿಬ್ಬಂದಿಯಿಂದ ಯೋಗ ಪ್ರದರ್ಶನ

ಅಂತರಾಷ್ಟ್ರೀಯ ಯೋಗ ದಿನಾಚರಣೆ ಇನ್ನೇನು ಬಂದೇಬಿಟ್ಟಿದೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಆಚರಣೆಗೆ ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿ ಎಂಬಂತೆ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯ ವಿಶಿಷ್ಟ ಪ್ರಯತ್ನದ ಯೋಗ ಪ್ರದರ್ಶನ ಗಮನ ಸೆಳೆದಿದೆ.

ಉತ್ತರಾಖಂಡ ರಾಜ್ಯ ವ್ಯಾಪ್ತಿಯಲ್ಲಿನ ಹಿಮಾಲಯದಲ್ಲಿ 15,000 ಅಡಿ ಎತ್ತರದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಯೋಗ ಪ್ರದರ್ಶಿಸಿದ್ದಾರೆ.

ವಿಮಾನ ರದ್ದಾದರೇನಂತೆ ನಿಗದಿತ ಸಮಯದಲ್ಲೇ ವಿವಾಹವಾದ ವಧು – ವರ

ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಯೋಗ ಪ್ರದರ್ಶನದ ವಿಡಿಯೊವನ್ನು ಹಂಚಿಕೊಂಡ ಐಟಿಬಿಪಿ, “ಹಿಮ್‌ವೀರ್ಸ್”ನ ಯೋಗ ಸೆಷನ್‌ ಎಂದು ಹೇಳಿದೆ. ಈ ಸಾಹಸದ ವಿಡಿಯೊವನ್ನು https://twitter.com/ITBP_official/status/1519881116312023040 ವೀಕ್ಷಿಸಬಹುದಾಗಿದೆ.

ಸಂಪೂರ್ಣ ಹಿಮಚ್ಛಾದಿತ ಗುಡ್ಡ ಪ್ರದೇಶದಲ್ಲಿ ಐಟಿಬಿಪಿ ತಂಡ ಉತ್ಸಾಹದಿಂದ ಯೋಗ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಇನ್ನೊಂದೆಡೆ ಐಟಿಬಿಪಿಯು ವಿಶಾಖಪಟ್ಟಣಂನ ಭೀಮ್ಲಿ ಸಮುದ್ರದ ಬೀಚ್‌ನಲ್ಲಿ ಯೋಗ ಪ್ರದರ್ಶನ ಮಾಡುತ್ತಿರುವ 56ನೇ ಬೆಟಾಲಿಯನ್‌ನ ಹಿಮ್‌ವೀರ್ಸ್ ಫೋಟೋಗಳನ್ನು ಹಂಚಿಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...