ಭಾರತ ಹಾಗೂ ಚೀನಾ ಆಕ್ರಮಿತ ಟಿಬೆಟ್ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಇಂಟೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ಮುಂಚೂಣಿ ಹೋರಾಟಗಾರರ ಹುದ್ದೆಗೆ ಮೊದಲ ಇಬ್ಬರು ಮಹಿಳೆಯರನ್ನು ಕಮಿಷನ್ ಮಾಡಲಾಗಿದೆ.
ಐಟಿಬಿಪಿಯಯಲ್ಲಿ ಸಹಾಯಕ ಕಮಾಂಡಂಟ್‌ಗಳಾಗಿ ಪ್ರಕೃತಿ ಹಾಗೂ ದೀಕ್ಷಾರನ್ನು ನೇಮಕ ಮಾಡಲಾಗಿದೆ. ಪ್ರಕೃತಿ ವಾಯುಪಡೆಯ ನಿವೃತ್ತ ಅಧಿಕಾರಿಯ ಮಗಳಾಗಿದ್ದಾರೆ. ದೀಕ್ಷಾ ತಂದೆ ಐಟಿಬಿಪಿಯಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಖಾಕಿಧಾರಿಯಾಗಿ ಮಗಳಿಗೆ ಸಲ್ಯೂಟ್ ಮಾಡಿದ ಕುಮಾರ್, ಮಗಳು ದೀಕ್ಷಾರಿಂದ ಸೆಲ್ಯೂಟ್ ಮರಳಿ ಪಡೆದಿದ್ದಾರೆ. ಇದಾದ ಬಳಿಕ ಅಪ್ಪ-ಮಗಳು ಪರಸ್ಪರ ಆಲಂಗಿಸಿ ಈ ಸಂತಸದ ಕ್ಷಣವನ್ನು ಸಂಭ್ರಮಿಸಿದ್ದಾರೆ. ಅಪ್ಪ-ಮಗಳ ಈ ಚಿತ್ರ ವೈರಲ್ ಆಗಿದೆ.
‘ಭಾಗ್ಯಲಕ್ಷ್ಮಿ ಯೋಜನೆ’ ಫಲಾನುಭವಿಗಳಿಗೆ ಬಿಗ್ ಶಾಕ್: ‘ಸುಕನ್ಯಾ ಸಮೃದ್ಧಿ’ಗೆ ಸೇರಿದ್ರೂ ಸಿಕ್ಕಿಲ್ಲ ಬಾಂಡ್, ಪಾಸ್ ಬುಕ್
ಉತ್ತರಾಖಂಡದ ಮಸ್ಸೂರಿಯಲ್ಲಿರುವ ಐಟಿಬಿಪಿ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಒಟ್ಟಾರೆ 53 ಅಧಿಕಾರಿಗಳು ಪಾಸ್‌ಔಟ್ ಆಗಿದ್ದಾರೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮುಖ್ಯ ಅತಿಥಿಯಾಗಿ ಪಾಸ್‌ಔಟ್ ಸಮಾರಂಭದಲ್ಲಿ ಆಗಮಿಸಿದ್ದರು.