ರಾಹುಲ್ ಗಾಂಧಿಯ “ಟು ಇಂಡಿಯಾಸ್” ಹೇಳಿಕೆಗೆ ಟಾಂಗ್ ಕೊಟ್ಟಿರುವ ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಪೋಷಕರ ಕಾರಣದಿಂದಾಗಿ ಅವರ ಆಲೋಚನೆ ದ್ವಂದ್ವವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ, ಇಟಾಲಿಯನ್ ತಾಯಿ ಮತ್ತು ಭಾರತೀಯ ತಂದೆಯ ನಡುವೆ ಬೆಳೆದ ಕಾರಣ, ಅವರು ಒಂದು ಭಾರತವನ್ನು ನೋಡುವ ಬದಲು ಎರಡು ಭಾರತಗಳನ್ನು ನೋಡುತ್ತಿದ್ದಾರೆ.
ಸೋಂಕು ಇಳಿಕೆ ಆಗ್ತಿದ್ರು ಕಡಿಮೆಯಾಗ್ತಿಲ್ಲ ಸಾಯುವವರ ಸಂಖ್ಯೆ..! ಆರೋಗ್ಯ ಇಲಾಖೆ ದಾಖಲೆಗಳಲ್ಲಿ ಶಾಕಿಂಗ್ ಸಂಗತಿ ಬಹಿರಂಗ
ರಾಹುಲ್ ಗಾಂಧಿ ಅವರು ಎರಡು ರೀತಿಯ ಸಂಸ್ಕೃತಿಗಳ ನಡುವೆ ಬೆಳೆದ ಕಾರಣ ಒಂದೇ ಭಾರತದಲ್ಲಿ ಎರಡು ಭಾರತವನ್ನು ನೋಡುವುದು ಸಹಜ. ತಾಯಿ ಸೋನಿಯಾ ಗಾಂಧಿ ಇಟಾಲಿಯನ್ ಹಾಗೂ ತಂದೆ ರಾಜೀವ್ ಗಾಂಧಿ ಭಾರತದವರಾಗಿದ್ದು, ಇಟಲಿ ಹಾಗೂ ಭಾರತದ ಸಂಸ್ಕೃತಿ ನಡುವೆ ಬೆಳೆದಿದ್ದಾರೆ. ಹೀಗಾಗಿ ಅವರಲ್ಲಿ ದ್ವಂದ್ವ ಚಿಂತನೆಯಿದ್ದು, ಅವರು ತನ್ನ ದೇಶವನ್ನ ಒಂದು ಎಂದು ನೋಡಲಾಗುತ್ತಿಲ್ಲ. ಅವರಲ್ಲಿ ಯಾವಾಗಲೂ ಸಂಘರ್ಷಗಳು ಇದ್ದೆ ಇರುತ್ತದೆ ಎಂದಿದ್ದಾರೆ ಅನಿಲ್ ವಿಜ್.
ಬುಧವಾರ ರಾಹುಲ್ ಗಾಂಧಿ ಅವರು ಶ್ರೀಮಂತರಿಗೊಂದು ಮತ್ತು ಬಡವರಿಗೊಂದು ಎಂಬ ಎರಡು ರೀತಿಯ ಭಾರತವನ್ನು ರಚಿಸಲಾಗಿದೆ ಮತ್ತು ಅವುಗಳ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದರು.