ಕಳೆದುಹೋದ ತನ್ನ ಸಹೋದರನನ್ನು 24 ವರ್ಷಗಳಿಂದ ಹುಡುಕುತ್ತಿದ್ದ ಇಟಲಿಯ ವ್ಯಕ್ತಿಯೊಬ್ಬರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘಕಾಲದಿಂದ ಕಾಣೆಯಾಗಿದ್ದ ಅವರ ಸಹೋದರನೇ ತನ್ನ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿರುವ ಘಟನೆ ಇಟಲಿಯಲ್ಲಿ ನಡೆದಿದೆ.
35 ವರ್ಷದ ಮಾರ್ಟಿನ್ ರಬನ್ಸರ್ ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಅವರ ಕಾಣೆಯಾಗಿದ್ದ ಸಹೋದರ 42 ವರ್ಷದ ಐವೊ ಅವರು, ಬೇಟೆಯಾಡುವ ಚಾಕುವಿನಿಂದ ತನ್ನತ್ತ ಬರುತ್ತಿರುವುದನ್ನು ನೋಡಿದಾಗ ಅವರಿಗೆ ಎಚ್ಚರವಾಗಿದೆ.
ಮೊದಲಿಗೆ ಮಾರ್ಟಿನ್ ತನ್ನ ದಾಳಿಕೋರನ ಯಾರೆಂದು ಗುರುತಿಸಲಾಗಲಿಲ್ಲ. ಭಯದಿಂದ ಅವರು ನೀವು ಯಾರು? ನಿಮಗೆ ಏನು ಬೇಕು? ಎಂದು ಕೂಗಿದ್ದಾರೆ. ಈ ವೇಳೆ ತಾನು ನಿನ್ನ ಸಹೋದರ ಐವೋ ಎಂಬುದಾಗಿ ದಾಳಿಕೋರ ಹೇಳಿದ್ದಾನೆ.
ಸಾಲ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅತ್ಯಾಚಾರದ ಆರೋಪ ಹೊರಿಸಿದ ಮಹಿಳೆ..!
ಇಟಲಿಯ ಆಲ್ಪ್ಸ್‌ನ ಸೆಲ್ವಾ ಡಿವಾಲ್ ಗಾರ್ಡೆನಾದಲ್ಲಿ ಈ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ. ಐವೊ ತಮ್ಮ ತಂದೆಯ ಮರಣದ ನಂತರ ತನ್ನ 18ನೇ ವಯಸ್ಸಿನಲ್ಲಿ ಮನೆಯಿಂದ ಹೊರಬಂದಿದ್ದ. ಇಷ್ಟು ವರ್ಷಗಳ ನಂತರ ಸಹೋದರರು ಭೇಟಿಯಾಗಿದ್ದು ಇದೇ ಮೊದಲ ಬಾರಿಗೆ ಎಂದು ಹೇಳಲಾಗಿದೆ.
ತಂದೆ ಮರಣದ ನಂತರ ಮಾರ್ಟಿನ್ ಹೆಸರಿಗೆ ಮನೆಯನ್ನು ಬರೆಯಲಾಗಿತ್ತು. ಇದು ಐವೋ ದ್ವೇಷಕ್ಕೆ ಕಾರಣವಾಗಿತ್ತು. ಹೀಗಾಗಿ ಆತ ಮನೆ ಬಿಟ್ಟು ಹೊರಬಂದಿದ್ದ. ಆದರೆ ಐವೋ ನಾಪತ್ತೆ ಬಗ್ಗೆ ಸಹೋದರ ಹುಡುಕಾಟ ನಡೆಸಿದ್ದರು, ಪೊಲೀಸರಿಗೂ ದೂರು ನೀಡಿದ್ದರು.
ಭಾವುಕರನ್ನಾಗಿಸುವಂತೆ ಮಾಡಿದ ತಂದೆ – ಮಗಳ ಅದ್ಭುತ ನೃತ್ಯ: ವಿಡಿಯೋ ವೈರಲ್
ಇನ್ನು ಮನೆಯಿಂದ ಹೊರಬಂದ ಬಳಿಕ ಹಿರಿಯ ಸಹೋದರ ಐವೋ ವೆರೋನಾದ ಬೀದಿಗಳಲ್ಲಿ ಮಲಗುತ್ತಿದ್ದನಂತೆ. ಹಾಗೂ ಅರೆಕಾಲಿಕ ಕೆಲಸಗಳನ್ನು ಮಾಡುತ್ತಿದ್ದ ಎಂದು ವರದಿಯಾಗಿದೆ. ಜೊತೆಗೆ ಸಮಯ ಸಿಕ್ಕಾಗಲೆಲ್ಲಾ ಸ್ಥಳೀಯ ಗ್ರಂಥಾಲಯದಲ್ಲಿ ಸಮಯ ಕಳೆಯುತ್ತಿದ್ದ.
ದೀರ್ಘಕಾಲದ ದ್ವೇಷದ ಬಳಿಕ ಅಂತಿಮವಾಗಿ ಸಹೋದರನ ಮನೆಗೆ ನುಗ್ಗಿದ ಐವೋ, ಮಾರ್ಟಿನ್ ನನ್ನು ಎಚ್ಚರಗೊಳಿಸಿ, ಅವನ ಎದೆಗೆ ಪದೇ ಪದೇ ಇರಿದಿದ್ದಾನೆ. ಆದರೆ, ಅವನ ಉದ್ದೇಶ ಕೊಲ್ಲುವುದಾಗಿರಲಿಲ್ಲ. ಚೂರಿಯಿಂದ ಇರಿತಕ್ಕೊಳಗಾದ ಮಾರ್ಟಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.