alex Certify ಹೀಗಿತ್ತು ಮೊದಲ ಬಾರಿಗೆ ಸಮೋಸಾ ತಿಂದ ಇಟಾಲಿಯನ್ ವ್ಯಕ್ತಿಯ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿತ್ತು ಮೊದಲ ಬಾರಿಗೆ ಸಮೋಸಾ ತಿಂದ ಇಟಾಲಿಯನ್ ವ್ಯಕ್ತಿಯ ಪ್ರತಿಕ್ರಿಯೆ

ವಿದೇಶಗಳಲ್ಲೂ ಖ್ಯಾತವಾಗಿರುವ ದೇಶೀ ತಿನಿಸುಗಳಲ್ಲಿ ಒಂದು ಸಮೋಸಾ. ಇದೀಗ ಇಟಾಲಿಯನ್ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಸಮೋಸಾ ತಿನ್ನುತ್ತಾ ಕೊಟ್ಟಿರುವ ಪ್ರತಿಕ್ರಿಯೆಯ ವಿಡಿಯೋವೊಂದು ನೆಟ್ಟಿಗರ ಹೃದಯ ಗೆದ್ದಿದೆ.

ಅಮಿತ್‌ ಮತ್ತು ಅಂಬ್ರಾ ಹೆಸರಿನ ಇಂಡೋ-ಇಟಾಲಿಯನ್ ಜೋಡಿಯೊಂದು ಇನ್‌ಸ್ಟಾಗ್ರಾಂನಲ್ಲಿರುವ ತಮ್ಮ ಪ್ರೊಫೈಲ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, ಅದಾಗಲೇ ಎರಡು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಕಂಡಿದೆ.

‘ಮಧುಮೇಹ’ದವರಿಗೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್

40 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹೊಂದಿರುವ ಈ ದಂಪತಿಗೆ ಯೂಟ್ಯೂಬ್‌ನಲ್ಲಿ 90 ಸಾವಿರ ಮೀರಿ ಅನುಯಾಯಿಗಳಿದ್ದಾರೆ. ತಮ್ಮದೇ ಅನೇಕ ವಿಡಿಯೋಗಳನ್ನು ನಿರಂತರವಾಗಿ ಪೋಸ್ಟ್ ಮಾಡುವ ಈ ಜೋಡಿ, ಕೆಲವೇ ಹೊತ್ತಿನಲ್ಲಿ ವೈರಲ್ ಆಗಿಬಿಡುತ್ತಾರೆ.

ಈ ವಿಡಿಯೋದಲ್ಲಿರುವ ಇಟಾಲಿಯನ್ ವ್ಯಕ್ತಿ ಅಂಬ್ರಾರ ತಂದೆಯಾಗಿದ್ದಾರೆ. ಬಾಯಿಗಿಡುವ ಮುನ್ನ ಸಮೋಸಾ ಮೇಲೆ ಸ್ಪಲ್ಪ ಪುದೀನಾ ಚಟ್ನಿ ಹಾಕಿಕೊಂಡ ಈತ ಮೊದಲ ರುಚಿಗೇ ಮನಸೋತಂತೆ ಕಾಣುತ್ತಾರೆ.

“ಭಾರತೀಯ ಖಾದ್ಯವೊಂದನ್ನು ಮೊದಲ ಬಾರಿಗೆ ಪ್ರಯತ್ನಿಸಿದೆ,” ಎಂದು ಪೋಸ್ಟ್‌ಗೆ ಕ್ಯಾಪ್ಷನ್ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...