ಕೂಕಿಸ್ಟ್ ಎಂಬ ಖ್ಯಾತ ಇಟಲಿಯಲ್ಲಿನ ಆಹಾರ ತಯಾರಿಕೆ ಚಾನೆಲ್‌ನಲ್ಲಿ ಇತ್ತೀಚೆಗೆ ಹೊಸ ಖಾದ್ಯ ಪರಿಚಯ ನಡೆದಿತ್ತು. ಬಲೂನ್ ಬ್ರೆಡ್ ಎಂದು ಕರೆಯಲಾಗಿತ್ತಾದರೂ, ಅದು ಉತ್ತರ ಭಾರತೀಯರ ನೆಚ್ಚಿನ ‘ರೋಟಿ’ ಯು ಉಬ್ಬುವಂತೆಯೇ ಉಬ್ಬಿಕೊಂಡಿತ್ತು.
ಇದರ ತಯಾರಿಕೆಗೆ ಬಳಸಲಾದ ಪದಾರ್ಥಗಳು ಕೂಡ ರೋಟಿಯ ಮತ್ತೊಂದು ಹಾಗೂ ಚೆನ್ನಾಗಿ ತುಪ್ಪ ಮೆತ್ತಲಾದ ರೂಪವಾದ ’ನಾನ್’ಗೆ ಹೋಲುತ್ತಿತ್ತು.
ಗುಡ್ ನ್ಯೂಸ್: ಗರೀಬ್ ಕಲ್ಯಾಣ್ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ 50 ಲಕ್ಷ ರೂ. ವಿಮೆ ಸೌಲಭ್ಯ
ಈ ವಿಡಿಯೊ ’ಕೂಕಿಸ್ಟ್ ವಾವ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಆಗಿದ್ದೇ ತಡ ಭಾರತೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಾಮಿ, ನಮ್ಮ ದೇಶದ ನಾನ್ ತೆಗೆದುಕೊಂಡು ಹೋಗಿ, ಹೊಸ ಖಾದ್ಯ ಎಂದು ಹೇಳಿಕೊಂಡು ’ಬಲೂನ್ ಬ್ರೆಡ್’ ಎಂದು ನಾಮಕರಣ ಮಾಡಿಬಿಟ್ಟಿರಾ? ಎಂದು ನೆಟ್ಟಿಗರು ಚಾನೆಲ್‌ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ತಂದೆ ಗೆಲುವಿಗಾಗಿ ಪ್ರಾರ್ಥಿಸಿದ ಜೀವಾ ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಮುದ್ದಾದ ಫೋಟೋ
ಇನ್ನೂ ಕೆಲವು ನೆಟ್ಟಿಗರು, ’ ಅಲ್ಲಿಗೆ ರೋಟಿಯನ್ನು ಕೂಡ ಬಿಳಿಯ ಜನರು ಎಂದು ಕರೆಸಿಕೊಳ್ಳುವ ನಾವೇ ಪಾಶ್ಚಾತ್ಯರು ಕಂಡುಹಿಡಿದಿದ್ದು ಎಂದು ಘೋಷಿಸಿಕೊಂಡುಬಿಡಿ,’ ಎಂದು ಕುಟುಕಿದ್ದಾರೆ. ಪೇಟೆಂಟ್ ಕೂಡ ಪಡೆದರೂ ಅಚ್ಚರಿಯಿಲ್ಲ ಎಂದು ಹಲವರು ಕಾಲೆಳೆದಿದ್ದಾರೆ.
ಒಟ್ಟಿನಲ್ಲಿ ಬಹಳ ಸಾಮಾನ್ಯವಾದ, ಆದರೆ ನಿತ್ಯ ಕೋಟ್ಯಂತರ ಜನರು ಭಾರತದಲ್ಲಿ ಸೇವಿಸುವ ರೋಟಿ, ನಾನ್‌ಗಳು ವಿದೇಶಿಗರ ಕೈಗಳಿಗೆ ಸೇರಿ ಬಲೂನ್ ಬ್ರೆಡ್ ಎಂಬ ವಿಚಿತ್ರ ಹೆಸರಿಗೆ ಪಾತ್ರವಾಗಿರುವುದು ಮಾತ್ರ ಹಾಸ್ಯಾಸ್ಪದವೇ ಸರಿ.