ಶಿವಮೊಗ್ಗ : ದೇಶದ ಹೆಸರು ಬದಲಾವಣೆ ವಿಚಾರ ರಾಜ್ಯದಲ್ಲಿ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಇದೀಗ ಮಾಜಿ ಸಚಿವ ಆರಗ ಜ್ಷಾನೇಂದ್ರ ಈ ಬಗ್ಗೆ ಹೇಳಿಕೆ ನೀಡಿದ್ದು, ಬ್ರಿಟಿಷರಿಗೆ ಭಾರತ ಎಂದು ಉಚ್ಚರಿಸಲು ಕಷ್ಟ ಆಗುತ್ತಿತ್ತು, ಅದಕ್ಕಾಗಿ ಇಂಡಿಯಾ ಅಂದ್ರು ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಆರಗ ಜ್ಞಾನೇಂದ್ರ ಬ್ರಿಟಿಷರಿಗೆ ಭಾರತ ಅಂತಾ ಉಚ್ಚಾರಣೆ ಕಷ್ಟ ಆಗುತ್ತಿತ್ತು. ಅದಕ್ಕಾಗಿ ಬ್ರಿಟಿಷರು ಇಂಡಿಯಾ ಪದ ಬಳಕೆ ಮಾಡಿದ್ದರು. ಇಂಡಿಯಾ ಹೆಸರಿಗೆ ತುಂಬಾ ಹಿನ್ನೆಲೆ ಇಲ್ಲ. ಇಂಡಿಯಾ ಶಬ್ದಕ್ಕೆ ಅಂತಹ ಮಹತ್ವ ಇಲ್ಲ ಎಂದರು. ದೇಶದ ಹೆಸರು ಭಾರತ ಎಂಬುದು ಸರಿಯಾದ ನಿರ್ಧಾರ. ಯಾರೂ ಕೂಡ ಇಂಡಿಯಾ ಮಾತಾ ಕೀ ಜೈ ಎನ್ನುವುದಿಲ್ಲ. ನಾವೆಲ್ಲ ಭಾರತ ಮಾತಾ ಕೀ ಜೈ ಎನ್ನುತ್ತೇವೆ ಎಂದು ಹೇಳಿದರು.
ದೇಶದ ಹೆಸರು ಬದಲಾವಣೆ ವಿಚಾರ ರಾಜ್ಯದಲ್ಲಿ ಹಲವು ಚರ್ಚೆಗಳನ್ನು ಹುಟ್ಟು ಹಾಕಿದ್ದು, ವಿವಿಧ ರೀತಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.