ಮುಸ್ಲಿಂ ಮಹಿಳೆಯೊಬ್ಬರು ಪುಟ್ಟ ಕೃಷ್ಣನ ವರ್ಣಚಿತ್ರವನ್ನು ರಚಿಸಿ ಕೇರಳದ ಕೃಷ್ಣನ ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ, ಕೇರಳದ ಕೋಯಿಕ್ಕೋಡ್‌ನ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಶ್ರೀಕೃಷ್ಣನ ವರ್ಣಚಿತ್ರಗಳಿಗಾಗಿ ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದರು.
ಕಳೆದ ಆರು ವರ್ಷಗಳಲ್ಲಿ ಪುಟ್ಟ ಕೃಷ್ಣನ 500ಕ್ಕೂ ಹೆಚ್ಚು ಚಿತ್ರಗಳನ್ನು ಜಸ್ನಾ ಸಲೀಂ ಚಿತ್ರಿಸಿದ್ದಾರೆ. ಆದರೆ ದೇವಾಲಯಕ್ಕೆ ಇದನ್ನು ನೀಡಲು ಇದುವರೆಗೆ ಸಾಧ್ಯವಾಗಿರಲಿಲ್ಲ.
ಆದರೆ ಭಾನುವಾರ, ಪಥನಂತಿಟ್ಟ ಜಿಲ್ಲೆಯ ಪಂದಳಂ ಸಮೀಪದ ಹಳ್ಳಿಯ ಶ್ರೀಕೃಷ್ಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀಕೃಷ್ಣ ವರ್ಣಚಿತ್ರವನ್ನು ಪ್ರಸ್ತುತಪಡಿಸುವ ಮುಖಾಂತರ ಆಕೆಯ ಕನಸು ನನಸಾಗಿದೆ. ಇದು ತನ್ನ ದೊಡ್ಡ ಕನಸಾಗಿತ್ತು ಎಂದು ಜಸ್ನಾ ಹರ್ಷದಿಂದ ಹೇಳಿದ್ದಾರೆ.
ಪೊಲೀಸರ ಭರ್ಜರಿ ಬೇಟೆ: IPL ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ, ಬರೋಬ್ಬರಿ 23 ಬುಕ್ಕಿಗಳು ಅರೆಸ್ಟ್
ಪುಟ್ಟ ಕೃಷ್ಣನು ಬೆಣ್ಣೆಯ ಪಾತ್ರೆಯೊಂದಿಗೆ ಕುಳಿತಿರುವುದನ್ನು ಚಿತ್ರಿಸುವ ಚಿತ್ರಕಲೆ, ಜಸ್ನಾ ಸಲೀಂ ಅದನ್ನು ದೇವಸ್ಥಾನಕ್ಕೆ ನೀಡುವ ಮುನ್ನವೇ ವೈರಲ್ ಆಗಿತ್ತು. ಜಸ್ನಾ, ತನ್ನ ಚಿತ್ರಕಲೆಯನ್ನು ಹಿಂದೂ ದೇವಾಲಯವು ಔಪಚಾರಿಕವಾಗಿ ಒಪ್ಪಿಕೊಳ್ಳುವುದು ಕನಸಿನ ಮಾತು ಎಂದೇ ಅಂದುಕೊಂಡಿದ್ದರು. ಆದರೀಗ ಅವರ ಕನಸು ನನಸಾಗಿದೆ.
“ಶ್ರೀಕೃಷ್ಣನ ಚಿತ್ರವನ್ನು ಪತ್ರಿಕೆಯಲ್ಲಿ ನೋಡಿದಾಗ, ಚಿತ್ರವನ್ನು ಚಿತ್ರಿಸಲು ನನಗೆ ಉತ್ಸಾಹ ಉಂಟಾಯಿತು. ಅಲ್ಲದೆ ಅದು ಚೆನ್ನಾಗಿ ಮೂಡಿಬಂದಿದೆ” ವಿದ್ಯಾರ್ಥಿ ದಿನಗಳಲ್ಲಿ ದೇಶದ ನಕ್ಷೆಯನ್ನು ಬಿಡಿಸಲು ಸಹ ಹೆಣಗಾಡುತ್ತಿದ್ದರಂತೆ. ಆದರೆ ಕಳೆದ ಆರು ವರ್ಷಗಳಲ್ಲಿ, ಈಕೆ ಕೃಷ್ಣನ ನೂರಾರು ವರ್ಣಚಿತ್ರಗಳನ್ನು ರಚಿಸಿದ್ದಾರೆ.
ಜಸ್ನಾಗೆ ಇಬ್ಬರು ಮಕ್ಕಳಿದ್ದು, ಆಕೆಯ ಪತಿ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.