
ಇದೀಗ ಈ ಅಪರೂಪದ ವಿದ್ಯಮಾನದ ಹಿಂದಿನ ವಿಜ್ಞಾನದ ಮೇಲೆ ಬೆಳಕು ಚೆಲ್ಲುತ್ತದೆ. ಟೆಕ್ಸಾಸ್‌ನಲ್ಲಿ ಕಂಡುಬಂದಿರೋ ವಿದ್ಯಮಾನವನ್ನು ಅನಿಮಲ್ ರೈನ್ ಎಂದು ಕರೆಯಲಾಗುತ್ತದೆ. ಚಂಡಮಾರುತಗಳು ಅಥವಾ ಸುಂಟರಗಾಳಿಗಳಿಂದ ಪ್ರೇರೇಪಿಸಲ್ಪಟ್ಟ ಜಲಪಾತಗಳಲ್ಲಿ ಪ್ರಾಣಿಗಳನ್ನು ಮೇಲಕ್ಕೆ ಎಳೆದುಕೊಂಡಾಗ ಈ ರೀತಿಯ ಘಟನೆ ನಡೆಯುತ್ತದೆ. ಚಂಡಮಾರುತದ ಬಲವು ಕಡಿಮೆಯಾಗುತ್ತಿದ್ದಂತೆ, ಈ ಪ್ರಾಣಿಗಳು ಮತ್ತೆ ಗುರುತ್ವಾಕರ್ಷಣೆಯ ಪ್ರಭಾವಕ್ಕೆ ಒಳಗಾಗಿ ನೆಲಕ್ಕೆ ಬೀಳುತ್ತವೆ. ಇದು ಅವುಗಳು ಮೋಡದಿಂದ ಬೀಳುತ್ತಿರುವಂತೆ ಗೋಚರಿಸುತ್ತವೆ.
ಅಪರೂಪವಾಗಿದ್ದರೂ, ಇಂತಹ ಅಭೂತಪೂರ್ವ ಮತ್ತು ವಿಶಿಷ್ಟ ಘಟನೆ ನಡೆದಿರುವುದು ಇದೇ ಮೊದಲಲ್ಲ. ನೆರೆ ರಾಜ್ಯ ಆಂಧ್ರಪ್ರದೇಶ, ಶ್ರೀಲಂಕಾದ ಜಾಫ್ನಾ, ಕ್ಯಾಲಿಫೋರ್ನಿಯಾ ಆರೊವಿಲ್ಲೆ ಸೇರಿದಂತೆ ಮುಂತಾದ ಹಲವಾರು ಪ್ರದೇಶಗಳು ಈ ಹಿಂದೆ ಇಂತಹ ವಿದ್ಯಮಾನವನ್ನು ವರದಿ ಮಾಡಿವೆ.
ಡಿ.29ರ ಬುಧವಾರ ಮಧ್ಯಾಹ್ನ ಬಿರುಗಾಳಿ ಅಪ್ಪಳಿಸಿದಾಗ ವಿಚಿತ್ರ ಹವಾಮಾನ ವಿದ್ಯಮಾನವೊಂದರಲ್ಲಿ ಟೆಕ್ಸರ್ಕಾನಾದ ಜೌಗು ಪ್ರದೇಶಗಳಲ್ಲಿ ಮೀನುಗಳ ಮಳೆ ಸುರಿದಿದೆ. ಇದನ್ನು ಅನೇಕ ನಾಗರಿಕರು ವರದಿ ಮಾಡಿದ್ದರು. ಟೆಕ್ಸಾಸ್‌ನಲ್ಲಿ ನಡೆದ ವಿಚಿತ್ರ ಘಟನೆಯನ್ನು ಟೆಕ್ಸರ್ಕಾನಾ ನಗರದ ಅಧಿಕೃತ ಫೇಸ್ಬುಕ್ ಪುಟದಲ್ಲೂ ಹಂಚಿಕೊಳ್ಳಲಾಗಿತ್ತು. ಪೋಸ್ಟ್ ನಲ್ಲಿ ಆಕಾಶದಿಂದ ಬಿದ್ದಿರುವ ಮೀನಿನ ಚಿತ್ರವನ್ನು ಹಂಚಿಕೊಳ್ಳಲಾಗಿತ್ತು.