alex Certify ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಬಿಗ್​ ಶಾಕ್​: ಡಿಸೈನ್​ ಬಾಕ್ಸ್​ ಸಂಸ್ಥೆಯ ಮೇಲೆ ಐಟಿ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಬಿಗ್​ ಶಾಕ್​: ಡಿಸೈನ್​ ಬಾಕ್ಸ್​ ಸಂಸ್ಥೆಯ ಮೇಲೆ ಐಟಿ ದಾಳಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಐಟಿ ಅಧಿಕಾರಿಗಳು ಪರೋಕ್ಷವಾಗಿ ಬಿಗ್​ ಶಾಕ್​ ನೀಡಿದ್ದಾರೆ. ಬೆಳ್ಳಂ ಬೆಳಗ್ಗೆ ರಾಜ್ಯದಲ್ಲಿ ಡಿಸೈನ್​ ಬಾಕ್ಸ್​ ಸಂಸ್ಥೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಸೈನ್​ ಬಾಕ್ಸ್​ ಕಂಪನಿ ಮುಖ್ಯಸ್ಥ ನರೇಶ್​ ಅರ್ಗವಾಲ್​ ತಂಗಿದ್ದ ಜೆ. ಡಬ್ಲು ಮ್ಯಾರಿಯಟ್​ ಹೋಟೆಲ್​​ ಮೇಲೂ ದಾಳಿ ನಡೆದಿದೆ.

BSY ಆಪ್ತರ ಮೇಲೆ ಐಟಿ ದಾಳಿ ನಡೆಸಿದ್ದೇ ಸಿದ್ದರಾಮಯ್ಯ: ಯಡಿಯೂರಪ್ಪರನ್ನು ಕಪಿಮುಷ್ಠಿಯಲ್ಲಿಡಲು ನಡೆದಿದೆ ರಣತಂತ್ರ; ಹೆಚ್​ಡಿಕೆ ಹೊಸ ಬಾಂಬ್​​

ಬೆಂಗಳೂರಿನ ಕಾವೇರಿ ಜಂಕ್ಷನ್​ ಬಳಿಯಿರುವ ಕಚೇರಿಯ ಮೇಲೆ ಐಟಿ ಅಧಿಕಾರಿಗಳು ಬೆಳಗ್ಗೆ 6:30ರ ಸುಮಾರಿಗೆ 2 ಕಾರುಗಳಲ್ಲಿ ಬಂದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಹುಮಹಡಿ ಕಟ್ಟಡದ 2ನೇ ಅಂತಸ್ಥಿನಲ್ಲಿರುವ ಕಚೇರಿಯ ಮೇಲೆ ದಾಳಿ ನಡೆದಿದೆ.

ಡಿಸೈನ್​​ ಬಾಕ್ಸ್​​ ಎಂಬ ಪಿಆರ್​ ಕಂಪನಿಗೂ ಹಾಗೂ ಡಿ.ಕೆ. ಶಿವಕುಮಾರ್​ಗೂ ಪರೋಕ್ಷ ಸಂಬಂಧವಿದೆ. ಡಿ.ಕೆ. ಶಿವಕುಮಾರ್​​ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮನ್ನ ಸಿಎಂ ಅಭ್ಯರ್ಥಿ ಎಂದು ತೋರಿಸಿಕೊಳ್ಳಲು ಮುಂದಾಗಿದ್ದರು. ಡಿಕೆಶಿಯನ್ನು ಸಿಎಂ ಅಭ್ಯರ್ಥಿ ಎಂದು ಪ್ರಚಾರ ಮಾಡುವ ಕೆಲಸವನ್ನು ಇದೇ ಡಿಸೈನ್ಸ್​ ಬಾಕ್ಸ್​​ ಕಂಪನಿ ಮಾಡುತ್ತಿತ್ತು. ಇದೀಗ ಈ ಕಂಪನಿಯ ಮೇಲೆ ನಡೆದಿರುವ ದಾಳಿ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...