
ನವದೆಹಲಿ: ಐಟಿ ಕಚೇರಿಗಳಿಗೆ ಮಾರ್ಚ್ 29 ರಿಂದ 31 ರವರೆಗೆ ರಜೆ ಇರುವುದಿಲ್ಲ. ಪ್ರಸಕ್ತ ಹಣಕಾಸು ವರ್ಷದ ತೆರಿಗೆಗೆ ಸಂಬಂಧಿಸಿದ ಕಾರ್ಯ ಪೂರ್ಣಗೊಳಿಸಲು ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇಶಾದ್ಯಂತ ಮಾರ್ಚ್ 29 ರಿಂದ 31ರವರೆಗೆ ಆದಾಯ ತೆರಿಗೆ ಇಲಾಖೆ ಕಚೇರಿಗಳು ತೆರೆದಿರುತ್ತವೆ.
2024-25ನೇ ಸಾಲಿನ ಆರ್ಥಿಕ ವರ್ಷ ಮಾರ್ಚ್ 31 ರಂದು ಅಂತ್ಯವಾಗಲಿದೆ. ವಾರಾಂತ್ಯ, ಯುಗಾದಿ ಮತ್ತು ರಂಜಾನ್ ಇದ್ದರೂ ತೆರಿಗೆ ಇಲಾಖೆ ಕಚೇರಿಗಳಿಗೆ ರಜೆ ಇರುವುದಿಲ್ಲ ಎಂದು ನೇರ ತೆರಿಗೆ ಕೇಂದ್ರ ಮಂಡಳಿ ತಿಳಿಸಿದೆ.
2023- 24ನೇ ಅಪ್ಡೇಟೆಡ್ ಐಟಿಆರ್ ಗಳನ್ನು ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ.
ಸರ್ಕಾರಿ ಕೆಲಸದ ಜೊತೆ ಜೋಡಣೆಯಾಗಿರುವ ಎಲ್ಲಾ ಬ್ಯಾಂಕುಗಳು ಮಾರ್ಚ್ 31ರಂದು ತೆರೆದಿರಬೇಕು ಎಂದು ಈಗಾಗಲೇ ಆರ್.ಬಿ.ಐ. ಆದೇಶ ಹೊರಡಿಸಿದೆ.