ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ. ಸಂತೋಷವಾಗಿರಲು ಹೊರಗಿನ ಕಾರಣವನ್ನು ಹುಡುಕುತ್ತಾರೆ. ಆದ್ರೆ ಸಂತೋಷವಾಗಿರುವ ಕಾರಣ ನಮ್ಮೊಳಗೆ ಮರೆಯಾಗಿರುತ್ತದೆ. ನಮ್ಮ ದೇಹದಲ್ಲಿ ನಾಲ್ಕು ವಿಧದ ಹ್ಯಾಪಿ ಹಾರ್ಮೋನುಗಳಿವೆ. ಇದನ್ನು ಸಿರೊಟೋನಿನ್, ಎಂಡಾರ್ಫಿನ್ ಗಳು, ಆಕ್ಸಿಟೋಸಿನ್ ಮತ್ತು ಡೋಪಮೈನ್ ಎಂದು ಕರೆಯಲಾಗುತ್ತದೆ.
ಸಂತೋಷವು ಈ ಹಾರ್ಮೋನುಗಳ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ. ದೇಹದಲ್ಲಿ ಈ ಹಾರ್ಮೋನುಗಳ ಕೊರತೆಯಿದ್ದರೆ ಮಾನಸಿಕವಾಗಿ ತೊಂದರೆಗೀಡಾಗುತ್ತೇವೆ. ಅದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಂತೋಷವಾಗಿರಲು ಈ ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸುವುದು ಮುಖ್ಯ.
ಆಕ್ಸಿಟೋಸಿನ್ : ಈ ಹಾರ್ಮೋನ್ ಪ್ರೀತಿಗೆ ಹೆಸರುವಾಸಿಯಾಗಿದೆ, ಆಕ್ಸಿಟೋಸಿನ್ ಎಂಬ ಈ ಹಾರ್ಮೋನ್ ಬಹಳ ಪ್ರಸಿದ್ಧವಾಗಿದೆ. ಪ್ರೀತಿಯನ್ನು ವ್ಯಕ್ತಪಡಿಸಿದಾಗ ಅಥವಾ ಹೃದಯಕ್ಕೆ ಹತ್ತಿರವಿರುವ ವ್ಯಕ್ತಿಯೊಂದಿಗೆ ವಾಸಿಸುವಾಗ ಈ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಹೆಚ್ಚಿಸಲು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ. ಹಾಸ್ಯ ಕಾರ್ಯಕ್ರಮಗಳನ್ನು ವೀಕ್ಷಿಸಿ ಮತ್ತು ವ್ಯಾಯಾಮ ಮಾಡಿ. ಪ್ರೀತಿಸುವವರನ್ನು ಅಪ್ಪಿಕೊಳ್ಳಿ. ಮಕ್ಕಳು ಮತ್ತು ನಿಮ್ಮ ಸಾಕುಪ್ರಾಣಿಗಳೊಂದಿಗೆ ಆಟವಾಡಿ.
ಡೋಪಮೈನ್ : ಈಗ ಬಹುಮಾನ ಸಿಗಲಿದೆ ಎಂಬಂತಹ ವಿಷ್ಯ ಮೆದುಳು ತಲುಪಿದಾಗ ಡೋಪಮೈನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಅನ್ನು ರಿವಾರ್ಡ್ ಕೆಮಿಕಲ್ ಎಂದೂ ಕರೆಯುತ್ತಾರೆ. ಈ ಡೋಪಮೈನ್ ಹಾರ್ಮೋನ್ ಹೆಚ್ಚಿಸಲು ನಿಮ್ಮ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಸೌಂದರ್ಯದ ಮೇಲೆ ಕೇಂದ್ರೀಕರಿಸಿ ಮತ್ತು ಅದನ್ನು ಸುಧಾರಿಸುವ ಮೂಲಕ ಜನರ ಮೆಚ್ಚುಗೆಯನ್ನು ಪಡೆಯುತ್ತೀರಿ. ನಿಮ್ಮ ಆಯ್ಕೆಯ ಆಹಾರವನ್ನು ಸೇವಿಸಿ. ಆಟವಾಡಿ ಮತ್ತು ನಿಮ್ಮ ಮುಂದೆ ಇರುವ ವ್ಯಕ್ತಿ ಮೆಚ್ಚುವಂತಹ ಕೆಲಸಗಳನ್ನು ಮಾಡಿ.
ಸಿರೊಟೋನಿನ್ : ಈ ಹಾರ್ಮೋನ್ ಹೆಚ್ಚಿಸಲು ಧ್ಯಾನ ಮತ್ತು ವ್ಯಾಯಾಮ ಮಾಡಿ. ಹುಲ್ಲುಹಾಸಿನ ಮೇಲೆ ನಡೆದು ಬಿಸಿಲಿನಲ್ಲಿ ದೇಹವನ್ನು ಕಾಯಿಸಿ. ಹೂವುಗಳನ್ನು ನೋಡಿ. ನೈಸರ್ಗಿಕ ಪರಿಸರವನ್ನು ಆನಂದಿಸಿ. ಈ ಹಾರ್ಮೋನ್ ಮನಸ್ಥಿತಿಯನ್ನು ಸ್ಥಿರವಾಗಿರಿಸಿಕೊಳ್ಳುತ್ತದೆ.
ಎಂಡಾರ್ಫಿನ್ ಗಳು : ಎಂಡಾರ್ಫಿನ್ಸ್ ಎಂಬ ಈ ಹಾರ್ಮೋನ್ ಹೆಚ್ಚಿಸಲು ಹಾಸ್ಯ ಕಾರ್ಯಕ್ರಮವನ್ನು ವೀಕ್ಷಿಸಬಹುದು. ಡಾರ್ಕ್ ಚಾಕೊಲೇಟ್ ತಿನ್ನಿರಿ. ನಗುವುದನ್ನು ಅಭ್ಯಾಸ ಮಾಡಿ. ವ್ಯಾಯಾಮ ಮಾಡಿ. ಜೋಕ್ ಓದಿ ಮತ್ತು ಕೇಳಿ. ಈ ಹಾರ್ಮೋನನ್ನು ನೋವು ಕೊಲ್ಲುವ ಹಾರ್ಮೋನ್ ಎಂದು ಕರೆಯಲಾಗುತ್ತದೆ.