ನಿದ್ರೆಯಲ್ಲಿ ಕನಸು ಕಾಣುವುದು ಸ್ವಾಭಾವಿಕ. ಕನಸಿನಲ್ಲಿ ನಾವು ಬೇರೆ ಜಗತ್ತನ್ನು ನೋಡ್ತೆವೆ. ಕನಸಿನಲ್ಲಿ ಬರುವುದು ನಿಜವೆಂದು ಭಾವಿಸುತ್ತೇವೆ. ಕನಸಿಗೆ ಅನೇಕ ಅರ್ಥವಿದೆ. ಕೆಲ ಕನಸುಗಳು ಶುಭ ಸಂಕೇತ ನೀಡಿದ್ರೆ ಮತ್ತೆ ಕೆಲ ಕನಸುಗಳು ಅಶುಭ ಸಂಕೇತವನ್ನು ನೀಡುತ್ತವೆ. ಕನಸಿನಲ್ಲಿ ಕೆಲ ಪ್ರಾಣಿ, ಪಕ್ಷಿಗಳು ಕಂಡ್ರೆ ಅದನ್ನು ಅಶುಭವೆನ್ನಲಾಗುತ್ತದೆ.
ಕನಸಿನಲ್ಲಿ ಕಾಡು ಪ್ರಾಣಿಗಳು ಕಾಣಿಸುವುದು ಅಶುಭ. ಕನಸಿನಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಂಡರೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಕಾಡು ಪ್ರಾಣಿ ದಾಳಿ ಮಾಡಿದಂತೆ ಕಂಡಲ್ಲಿ ದೊಡ್ಡ ಸಮಸ್ಯೆಯ ಸೂಚನೆಯಾಗಿದೆ. ಹೆತ್ತವರಿಗೆ ಸಮಸ್ಯೆಯಾಗುವ ಸಂಕೇತವಾಗಿದೆ. ಮೋಸ ಹೋಗುವ ಸಾಧ್ಯತೆಯೂ ಇದೆ.
ಕನಸಿನಲ್ಲಿ ಕಪ್ಪು ಬೆಕ್ಕು ಕಾಣಿಸಿಕೊಂಡಲ್ಲಿ ಅಥವಾ ಬೆಕ್ಕುಗಳು ಗಲಾಟೆ ಮಾಡುತ್ತಿದ್ದಂತೆ ಕಂಡಲ್ಲಿ ಇದು ಅಶುಭ ಸಂಕೇತ. ಬೆಕ್ಕುಗಳು ಜಗಳವಾಡುವುದು ಸ್ನೇಹತರ ಮಧ್ಯೆ ಜಗಳದ ಸಂಕೇತವಾಗಿದೆ. ಬಿಳಿ ಬೆಕ್ಕು ಕನಸಿನಲ್ಲಿ ಕಂಡರೆ ಆರ್ಥಿಕ ನಷ್ಟದ ಸೂಚನೆಯಾಗಿದೆ.
ಕನಸಿನಲ್ಲಿ ಮಿಡತೆ ಕಾಣಿಸಿಕೊಂಡಲ್ಲಿ ವ್ಯವಹಾರದಲ್ಲಿ ನಷ್ಟವಾಗುತ್ತದೆ ಎಂಬ ಸೂಚನೆಯಾಗಿದೆ. ಇಂಥ ಕನಸು ಬಿದ್ದಲ್ಲಿ ನೀವು ಜಾಗರೂಕರಾಗಿರಬೇಕು. ವ್ಯವಹಾರದಲ್ಲಿ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು.
ಕನಸಿನಲ್ಲಿ ಸಾಕಷ್ಟು ಇರುವೆಗಳು ಕಾಣಿಸಿದರೆ ಅಶುಭ ಚಿಹ್ನೆಯಾಗಿದೆ. ಜೀವನದಲ್ಲಿ ಸಮಸ್ಯೆ ಬರಲಿದೆ ಎಂದರ್ಥ. ಶತ್ರುಗಳಿಂದ ನಷ್ಟವಾಗುವ ಸಾಧ್ಯತೆಯಿರುತ್ತದೆ. ಕನಸಿನಲ್ಲಿ ಹಾವು-ಮುಂಗುಸಿ ಜಗಳವಾಡುವುದು ಕಂಡಲ್ಲಿ ನ್ಯಾಯಾಲಯದ ಪ್ರಕರಣ ಎದುರಾಗಲಿದೆ ಎಂಬ ಸಂಕೇತ.